ಅಮೆರಿಕ: 3 ದಿನದಲ್ಲಿ 538 ಅಕ್ರಮ ವಲಸಿಗರ ಬಂಧನ, ನೂರಾರು ಗಡೀಪಾರು

Update: 2025-01-24 21:27 IST
Trump

ಡೊನಾಲ್ಡ್ ಟ್ರಂಪ್ | PC : PTI 

  • whatsapp icon

ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕದ ಮೊದಲ ಮೂರು ದಿನಗಳಲ್ಲಿ ಅಮೆರಿಕದ ಅಧಿಕಾರಿಗಳು ಅಕ್ರಮ ವಲಸಿಗರ ನಿಯಂತ್ರಣ ಕಾರ್ಯಾಚರಣೆಯಲ್ಲಿ 538 ಅಕ್ರಮ ವಲಸಿಗರನ್ನು ಬಂಧಿಸಿದ್ದು ನೂರಾರು ಮಂದಿಯನ್ನು ಗಡೀಪಾರು ಮಾಡಿದೆ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಕ್ಯಾರೊಲಿನ್ ಲಿವಿಟ್ ಹೇಳಿದ್ದಾರೆ.

ಟ್ರಂಪ್ ಆಡಳಿತವು ಶಂಕಿತ ಭಯೋತ್ಪಾದಕ, ಅಪ್ರಾಪ್ತ ವಯಸ್ಕರ ವಿರುದ್ಧ ಅತ್ಯಾಚಾರ ಅಪರಾಧಕ್ಕೆ ಶಿಕ್ಷೆಗೊಳಗಾದ ಹಲವಾರು ಅಕ್ರಮ ವಲಸಿಗರು ಸೇರಿದಂತೆ 538 ಅಕ್ರಮ ವಲಸಿಗ ಕ್ರಿಮಿನಲ್‍ ಗಳನ್ನು ಬಂಧಿಸಿದೆ. ಜತೆಗೆ ಮಿಲಿಟರಿ ವಿಮಾನದ ಮೂಲಕ ನೂರಾರು ಅಕ್ರಮ ವಲಸಿಗರನ್ನು ಗಡೀಪಾರು ಮಾಡಿದೆ. ಇತಿಹಾಸದಲ್ಲೇ ಬೃಹತ್ ಗಡೀಪಾರು ಕಾರ್ಯಾಚರಣೆ ನಡೆಯುತ್ತಿದೆ. ಭರವಸೆಗಳನ್ನು ನೀಡಿದ್ದಾರೆ, ಭರವಸೆಗಳನ್ನು ಉಳಿಸಿಕೊಂಡಿದ್ದಾರೆ ಎಂದು ಕ್ಯಾರೊಲಿನ್ ಲಿವಿಟ್ ಹೇಳಿದ್ದಾರೆ.

ಅಕ್ರಮ ವಲಸಿಗರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಚುನಾವಣಾ ಪ್ರಚಾರದ ಸಂದರ್ಭ ಟ್ರಂಪ್ ಭರವಸೆ ನೀಡಿದ್ದರು. ಅಮೆರಿಕದ ಇತಿಹಾಸದಲ್ಲೇ ಅತೀ ದೊಡ್ಡ ಗಡೀಪಾರು ಕಾರ್ಯಾಚರಣೆ ನಡೆಯಲಿದ್ದು ಇದು ಅಮೆರಿಕದಲ್ಲಿನ ಅಂದಾಜು 11 ದಶಲಕ್ಷ ಅಕ್ರಮ ವಲಸಿಗರ ಮೇಲೆ ಪರಿಣಾಮ ಬೀರಲಿದೆ ಎಂದು ಟ್ರಂಪ್ ಹೇಳಿದ್ದರು.  

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News