ಅಮೆರಿಕವು ಉಕ್ರೇನ್ ಕೈಬಿಡುವುದಿಲ್ಲ: ಬೈಡನ್

Update: 2023-10-02 17:13 GMT

ಜೋ ಬೈಡನ್ | Photo: PTI 

ವಾಷಿಂಗ್ಟನ್ : ಸರಕಾರದ ಕಾರ್ಯನಿರ್ವಹಣೆ ಸ್ಥಗಿತಗೊಳ್ಳುವುದನ್ನು ತಪ್ಪಿಸಲು ಉಕ್ರೇನಿಗೆ ಹೆಚ್ಚುವರಿ ಆರ್ಥಿಕ ನೆರವು ಒದಗಿಸುವ ನಿರ್ಧಾರವನ್ನು ಬದಿಗಿರಿಸುವ ಷರತ್ತಿಗೆ ಒಪ್ಪಿದರೂ, ಅಮೆರಿಕ ಯಾವತ್ತೂ ಉಕ್ರೇನ್ನ ಕೈಬಿಡುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

‘ನಾವು ದೂರ ಹೋಗುವುದಿಲ್ಲ. ನಮ್ಮ ಬೆಂಬಲವನ್ನು ನೀವು ನಂಬಬಹುದು ಎಂದು ನಮ್ಮ ಅಮೆರಿಕನ್ ಮಿತ್ರರು, ಅಮೆರಿಕನ್ ಜನತೆ ಮತ್ತು ಉಕ್ರೇನಿನ ಜನತೆಗೆ ಭರವಸೆ ನೀಡಲು ಬಯಸುತ್ತೇನೆ. ರಶ್ಯದ ಆಕ್ರಮಣದಿಂದ ಆರಂಭಗೊಂಡಿರುವ ಯುದ್ಧದಲ್ಲಿ ಉಕ್ರೇನ್ಗೆ ನೆರವಿನ ಪ್ಯಾಕೇಜ್ ಒದಗಿಸುವ ತುರ್ತು ಅಗತ್ಯವಿದೆ’ ಎಂದು ಶ್ವೇತಭವನದಲ್ಲಿ ನಡೆದ ಸುದ್ಧಿಗೋಷ್ಟಿಯಲ್ಲಿ ಬೈಡನ್ ಹೇಳಿದ್ದಾರೆ.

ಡೆಮೊಕ್ರಾಟಿಕ್ ಮತ್ತು ರಿಪಬ್ಲಿಕನ್ ಎರಡೂ ಪಕ್ಷಗಳ ಬಹುತೇಕ ಸದಸ್ಯರು, ಸೆನೆಟ್ ಮತ್ತು ಸಂಸತ್ ಉಕ್ರೇನ್ಗೆ ಹೆಚ್ಚುವರಿ ನೆರವು ಒದಗಿಸಲು ಹೃದಯಾಂತರಾಳದಿಂದ ಬೆಂಬಲಿಸಿದ್ದಾರೆ. ಆದರೆ ಬೆರಳೆಣಿಕೆಯಷ್ಟು ಸದಸ್ಯರು ವಿರೋಧಿಸುತ್ತಿದ್ದಾರೆ. ಈ ಆಟವನ್ನು ನಿಲ್ಲಿಸಿ ಮತ್ತು ನೆರವು ಮುಂದುವರಿಕೆಗೆ ಅನುವು ಮಾಡಿಕೊಡಿ’ ಎಂದು ಬೈಡನ್ ಆಗ್ರಹಿಸಿದ್ದಾರೆ.

ಸಂಸತ್ ನಲ್ಲಿ ಪ್ರತ್ಯೇಕ ಮತದಾನದ ಮೂಲಕ ಉಕ್ರೇನ್ ಗೆ ನೆರವು ಮುಂದುವರಿಸುವುದಾಗಿ ರಿಪಬ್ಲಿಕನರು ವಾಗ್ದಾನ ಮಾಡಿದ್ದಾರೆ. ಉಕ್ರೇನ್ ಗೆ ಯಾವುದೇ ಸಂದರ್ಭದಲ್ಲೂ ಬೆಂಬಲವನ್ನು ನಿಲ್ಲಿಸಲಾಗದು’ ಎಂದು ಬೈಡನ್ ಹೇಳಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News