ಅಮೆರಿಕ ಸೆನೆಟ್ ವಿಚಾರಣೆಯ ಸಂದರ್ಭ ಆ್ಯಂಟನಿ ಬ್ಲಿಂಕೆನ್ ಗೆ ಯುದ್ಧವಿರೋಧಿ ಪ್ರತಿಭಟನಾಕಾರರಿಂದ ಅಡ್ಡಿ

Update: 2023-11-03 18:07 GMT

Photo: instagram/secblinken

ವಾಷಿಂಗ್ಟನ್: ಗಾಝಾದಲ್ಲಿ ಕದನವಿರಾಮಕ್ಕೆ ಆಗ್ರಹಿಸುತ್ತಿರುವ ಪ್ರತಿಭಟನಾಕಾರರು, ಅಮೆರಿಕಾ ಸೆನೆಟ್ ವಿಚಾರಣೆಯ ಸಂದರ್ಭದಲ್ಲಿ ಅಮೆರಿಕಾದ ರಾಜ್ಯ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಅವರಿಗೆ ಅಡ್ಡಿಪಡಿಸಿರುವ ಘಟನೆ ನಡೆದಿದೆ ಎಂದು bbc.co.uk ವರದಿ ಮಾಡಿದೆ.

ಗುಂಪಿನಲ್ಲಿದ್ದ ಅಸಂಖ್ಯಾತ ಜನರು ಮೇಲೆದ್ದು ನಿಂತು, ‘ಈಗ ಕದನ ವಿರಾಮ’ ಎಂಬ ಘೋಷಣೆಯನ್ನು ಕೂಗಿದರು.

ಶ್ವೇತ ಭವನದ 106 ಬಿಲಿಯನ್ ಡಾಲರ್ ಮೊತ್ತದ ರಾಷ್ಟ್ರೀಯ ಭದ್ರತಾ ನಿಧಿ ಮನವಿಯ ಕುರಿತು ಅಮೆರಿಕ ರಾಜ್ಯ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಹಾಗೂ ಅಮೆರಕಾ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಪ್ರಮಾಣೀಕರಿಸಿದರು.

ಇಸ್ರೇಲ್ ಸೇನಾಪಡೆಗಳಿಗೆ 14.3 ಬಿಲಿಯನ್ ಮೊತ್ತದ ನೆರವನ್ನು ಒದಗಿಸುವುದೂ ಸೇರಿದೆ.

ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಬ್ಲಿಂಕೆನ್ ಅವರ ಹೇಳಿಕೆ ಪ್ರಾರಂಭವಾಗುವವರೆಗೂ ಕಾದು, ನಂತರ ಅವರ ವಿರುದ್ಧ ಘೋಷಣೆ ಕೂಗಲು ಪ್ರಾರಂಭಿಸಿದರು. ಇದರಿಂದ ಬ್ಲಿಂಕೆನ್ ಹೇಳಿಕೆ ನೀಡಲು ಹಲವು ಬಾರಿ ತಡೆ ಎದುರಾಯಿತು.

ಕೂಡಲೇ ಪ್ರತಿಭಟನಾಕಾರರನ್ನು ಸುತ್ತುವರಿದ ಪೊಲೀಸರು ಅವರನ್ನು ಕೋಣೆಯಿಂದ ಹೊರಗೆ ಕರೆದುಕೊಂಡು ಹೋದರು.

ಡಿರ್ಕ್ಸನ್ ಸೆನೆಟ್ ಕಚೇರಿ ಕಟ್ಟಡದಲ್ಲಿ ಕಾನೂನುಬಾಹಿರವಾಗಿ ಪ್ರತಿಭಟಿಸಿದ ಆರೋಪದಲ್ಲಿ 12 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News