ಆಸ್ಟ್ರೇಲಿಯಾ | ಲಘು ವಿಮಾನಗಳ ಡಿಕ್ಕಿ; 3 ಮಂದಿ ಸಾವು

Update: 2024-10-26 20:35 IST
ಆಸ್ಟ್ರೇಲಿಯಾ | ಲಘು ವಿಮಾನಗಳ ಡಿಕ್ಕಿ; 3 ಮಂದಿ ಸಾವು

PC : X \ @reportafrique

  • whatsapp icon

ಸಿಡ್ನಿ : ಶನಿವಾರ ಆಸ್ಟ್ರೇಲಿಯಾದ ಸಿಡ್ನಿಯ ನೈಋತ್ಯ ಪ್ರಾಂತದಲ್ಲಿ 2 ಲಘು ವಿಮಾನಗಳು ಆಗಸದಲ್ಲಿ ಪರಸ್ಪರ ಡಿಕ್ಕಿಯಾಗಿ ಪತನಗೊಂಡಿದ್ದು ಮೂವರು ಮೃತಪಟ್ಟಿರುವುದಾಗಿ ವರದಿಯಾಗಿದೆ.

ಇಬ್ಬರು ಪ್ರಯಾಣಿಸುತ್ತಿದ್ದ ಸೆಸ್ನಾ ವಿಮಾನ ಹಾಗೂ ಒಬ್ಬ ವ್ಯಕ್ತಿಯಿದ್ದ ಲಘು ವಿಮಾನ ಸಿಡ್ನಿಯ ನೈಋತ್ಯಕ್ಕೆ 55 ಮೈಲಿ ದೂರದಲ್ಲಿ ಪರಸ್ಪರ ಡಿಕ್ಕಿಯಾಗಿ ಅರಣ್ಯ ಪ್ರದೇಶಕ್ಕೆ ಪತನಗೊಂಡಿದೆ.

ಆಸ್ಟ್ರೇಲಿಯಾ ಪೊಲೀಸ್, ಅಗ್ನಿಶಾಮಕ ದಳ ಮತ್ತು ಆಂಬ್ಯುಲೆನ್ಸ್ ಸಿಬಂದಿ ವಿಮಾನಗಳು ಪತನಗೊಂಡಿರುವ ಪ್ರದೇಶವನ್ನು ತಲುಪಿದ್ದು ಅಪಘಾತದಲ್ಲಿ ಯಾರೂ ಬದುಕುಳಿದಿಲ್ಲ ಎಂದು ನ್ಯೂಸೌತ್ ವೇಲ್ಸ್ ಪೊಲೀಸರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News