ಇಸ್ರೇಲ್‌ ನ ರಾಷ್ಟ್ರೀಯ ಭದ್ರತಾ ಸಚಿವರಾಗಿ ಬೆನ್‍ಗ್ವಿರ್ ಮರುನೇಮಕ

Update: 2025-03-19 20:55 IST
ಇಸ್ರೇಲ್‌ ನ ರಾಷ್ಟ್ರೀಯ ಭದ್ರತಾ ಸಚಿವರಾಗಿ ಬೆನ್‍ಗ್ವಿರ್ ಮರುನೇಮಕ

ಇಟಾಮರ್ ಬೆನ್‍ಗ್ವಿರ್ | PC : NDTV 

  • whatsapp icon

ಟೆಲ್‍ಅವೀವ್: ಕಟ್ಟಾ ಬಲಪಂಥೀಯ ಇಟಮರ್ ಬೆನ್‍ಗ್ವಿರ್ ಅವರನ್ನು ರಾಷ್ಟ್ರೀಯ ಭದ್ರತಾ ಸಚಿವರನ್ನಾಗಿ ಮರುನೇಮಿಸುವ ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರ ಪ್ರಸ್ತಾಪವನ್ನು ಇಸ್ರೇಲ್ ಸರಕಾರ ಸರ್ವಾನುಮತದಿಂದ ಅನುಮೋದಿಸಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಜನವರಿ 19ರಂದು ಜಾರಿಗೆ ಬಂದ ಗಾಝಾ ಕದನ ವಿರಾಮ ಒಪ್ಪಂದವನ್ನು ವಿರೋಧಿಸಿ ಬೆನ್‍ಗ್ವಿರ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಕದನ ವಿರಾಮ ಒಪ್ಪಂದವು `ಹಮಾಸ್‍ಗೆ ಶರಣಾಗತಿ'ಯಾದಂತೆ ಎಂದು ಬೆನ್‍ಗ್ವಿರ್ ಅವರ ಪಕ್ಷ ಟೀಕಿಸಿದೆ.

ಹಮಾಸ್ ವಿರುದ್ಧ ಪೂರ್ಣ ಬಲ ಪ್ರಯೋಗಿಸಿ ಕಾರ್ಯಾಚರಣೆ ನಡೆಸಲಾಗುವುದು. ಕಳೆದ 24 ಗಂಟೆಗಳಲ್ಲಿ ನಮ್ಮ ತೋಳಿನ ಶಕ್ತಿ ಹಮಾಸ್‍ಗೆ ಅರಿವಾಗಿರಬಹುದು ಎಂದು ನೆತನ್ಯಾಹು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News