ತೆಪ್ಪಕ್ಕೆ ದೋಣಿ ಡಿಕ್ಕಿ: ಒಬ್ಬ ಸಾವು; ಹಲವರಿಗೆ ಗಾಯ
Update: 2025-04-28 21:10 IST

PC : NDTV
ನ್ಯೂಯಾರ್ಕ್: ಅಮೆರಿಕದ ಫ್ಲೋರಿಡಾ ರಾಜ್ಯದ ಕ್ಲಿಯರ್ ವಾಟರ್ ನಗರದ ಬಳಿಯ ನದಿಯಲ್ಲಿ ದೋಣಿ ಮತ್ತು ತೆಪ್ಪದ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಓರ್ವ ಮೃತಪಟ್ಟಿದ್ದು ಇತರ ಹಲವರು ಗಾಯಗೊಂಡಿರುವುದಾಗಿ ವರದಿಯಾಗಿದೆ.
ಅಪಘಾತದ ಬಳಿಕ ದೋಣಿ ಅಲ್ಲಿಂದ ಪರಾರಿಯಾಗಿದ್ದು ಅದರ ಪತ್ತೆ ಕಾರ್ಯ ಮುಂದುವರಿದಿದೆ. ತೆಪ್ಪದಲ್ಲಿ ಇಬ್ಬರು ಸಿಬ್ಬಂದಿಗಳ ಸಹಿತ ಸುಮಾರು 45 ಜನರು ಪ್ರಯಾಣಿಸುತ್ತಿದ್ದು ಗಾಯಗೊಂಡವರಲ್ಲಿ 6 ಜನರ ಸ್ಥಿತಿ ಗಂಭೀರವಾಗಿದ್ದು ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.