ಭಾರತ, ಪಾಕಿಸ್ತಾನ ಎರಡೂ ನನಗೆ ಆಪ್ತ ದೇಶಗಳು; ಆದರೆ ಪಹಲ್ಗಾಮ್ ದಾಳಿ ಕೆಟ್ಟದು: ಟ್ರಂಪ್

Update: 2025-04-26 08:30 IST
ಭಾರತ, ಪಾಕಿಸ್ತಾನ ಎರಡೂ ನನಗೆ ಆಪ್ತ ದೇಶಗಳು; ಆದರೆ ಪಹಲ್ಗಾಮ್ ದಾಳಿ ಕೆಟ್ಟದು: ಟ್ರಂಪ್

PC: screengrab/ x.com/ANI

  • whatsapp icon

ವಾಷಿಂಗ್ಟನ್: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿ "ತೀರಾ ಕೆಟ್ಟದು" ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ.

ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಘರ್ಷಗಳು ಸದಾ ಇವೆ. ಉಭಯ ದೇಶಗಳು ಒಂದಲ್ಲ ಒಂದು ವಿಧಾನದಲ್ಲಿ ಇವುಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಸ್ಪಷ್ಟಪಡಿಸಿದರು.

"ನಾನು ಭಾರತಕ್ಕೆ ತೀರಾ ಆಪ್ತ; ಅಂತೆಯೇ ಪಾಕಿಸ್ತಾನಕ್ಕೆ ಕೂಡಾ ಆಪ್ತ. ಕಾಶ್ಮೀರದಲ್ಲಿ ಸಾವಿರ ವರ್ಷ ಅವರು ಯುದ್ಧ ಮಾಡಿಕೊಳ್ಳಬಹುದು. ಸಾವಿರ ವರ್ಷಕ್ಕಿಂತಲೂ ಅಧಿಕ ಅವಧಿಗೂ ಅದು ಮುಂದುವರಿಯಬಹುದು. ಆದರೆ ಭಯೋತ್ಪಾದಕ ದಾಳಿ ಕೆಟ್ಟದು" ಎಂದು ಟ್ರಂಪ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಎಎನ್ಐ ವರದಿ ಮಾಡಿದೆ.

1500 ವರ್ಷಗಳಿಂದ ಇಲ್ಲಿ ಸಂಘರ್ಷ ಇದೆ. ಇದು ಒಂದೇ ಬಗೆಯದ್ದು; ಆದರೆ ಒಂದಲ್ಲ ಒಂದು ವಿಧಾನದಲ್ಲಿ ಇದನ್ನು ಬಗೆಹರಿಸಿಕೊಳ್ಳಬಹುದು ಎಂಬ ನಿರೀಕ್ಷೆ ನನ್ನದು ಎಂದರು.

ಪಹಲ್ಗಾಮ್ ನಲ್ಲಿ ನಡೆದ ಉಗ್ರ ದಾಳಿಯಲ್ಲಿ 26 ಮಂದಿ ಪ್ರವಾಸಿಗರು ಹತ್ಯೆಗೀಡಾದ ಬಳಿಕ ಉಭಯ ದೇಶಗಳ ನಡುವಿನ ಸಂಘರ್ಷ ಮತ್ತಷ್ಟು ಹೆಚ್ಚದೆ. 2019ರ ಪುಲ್ವಾಮಾ ಬಾಂಬ್ ದಾಳಿಯ ಬಳಿಕ ನಡೆದ ಅತಿದೊಡ್ಡ ಭಯೋತ್ಪಾದಕ ದಾಳಿ ಇದಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News