ಕೆನಡಾ | ನಿಜ್ಜಾರ್ ಸಂಬಂಧಿ, ಪನ್ನೂನ್ ಆಪ್ತನ ಮೇಲೆ ದಾಳಿ

Update: 2024-08-20 16:16 GMT

ಒಟ್ಟಾವ : ಹತ್ಯೆಯಾಗಿರುವ ಖಾಲಿಸ್ತಾನ್ ಮುಖಂಡ ಹರ್ದೀಪ್ ಸಿಂಗ್ ನಿಜ್ಜಾರ್ ಸೋದರ ಸಂಬಂಧಿ ರಘ್ ಬೀರ್ ನಿಜ್ಜಾರ್ ನ ಮನೆಯ ಮೇಲೆ ಗುಂಡಿನ ದಾಳಿ ನಡೆದಿರುವುದಾಗಿ ಕೆನಡಾ ಪೊಲೀಸರು ಹೇಳಿದ್ದಾರೆ.

ಸಿಖ್ಸ್ ಫಾರ್ ಜಸ್ಟಿಸ್ (ಎಸ್‍ಎಫ್‍ಜೆ)ನ ಮುಖಂಡ ಗುರುಪತ್ವಂತ್ ಸಿಂಗ್ ಪನ್ನೂನ್‍ ನ ಆಪ್ತ ಮತ್ತು ಕೆನಡಾದ ಸರ್ರೆಯಲ್ಲಿನ ಗುರುನಾನಕ್ ಸಿಖ್ ದೇವಸ್ಥಾನದ ಮಾಜಿ ಅಧ್ಯಕ್ಷನಾಗಿರುವ ರಘ್‍ಬೀರ್ ನಿಜ್ಜಾರ್ ಮತ್ತೆ ಅಧ್ಯಕ್ಷೀಯ ಚುನಾವಣೆಗೆ ನಾಮಪತ್ರ ಸಲ್ಲಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಖಾಲಿಸ್ತಾನ್ ಗುಂಪುಗಳ ನಡುವಿನ ದ್ವೇಷ ಅಥವಾ ಮಾದಕ ವಸ್ತುಗಳ ಕಳ್ಳಸಾಗಣೆಗೆ ಸಂಬಂಧಿಸಿದ ವಿವಾದ ದಾಳಿಗೆ ಕಾರಣವಾಗಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಮೆರಿಕದ ಸ್ಯಾನ್‍ಫ್ರಾನ್ಸಿಸ್ಕೋದಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ಹರ್ದೀಪ್ ಸಿಂಗ್ ನಿಜ್ಜಾರ್ ನಿಕಟವರ್ತಿ ಸತೀಂದರ್ ಪಾಲ್ ಸಿಂಗ್ ರಾಜು ಪ್ರಯಾಣಿಸುತ್ತಿದ್ದ ಟ್ರಕ್‍ನ ಮೇಲೆ ಹೊಂಚು ದಾಳಿ ನಡೆದಿದೆ. ಆದರೆ ಸತೀಂದರ್ ಪಾಲ್ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದು ಗುಂಡು ಹಾರಿಸಿದ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News