ಕೆನಡಾ | ಮಹಾರಾಜ ರಂಜಿತ್ ಸಿಂಗ್ ಪ್ರತಿಮೆ ವಿರೂಪ: ವರದಿ

Update: 2024-09-29 16:57 GMT

(Image: @HinduAmerican/X)

ಒಟ್ಟಾವ : ಕೆನಡಾದ ಒಂಟಾರಿಯೋದಲ್ಲಿರುವ ಮಹಾರಾಜ ರಂಜಿತ್ ಸಿಂಗ್ ಅವರ ಪ್ರತಿಮೆಯನ್ನು ಫೆಲೆಸ್ತೀನ್ ಪರ ಪ್ರತಿಭಟನಾಕಾರರು ವಿರೂಪಗೊಳಿಸಿದ್ದಾರೆ ಎಂದು ಹೇಳಲಾದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು ಭಾರತೀಯರಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಶನಿವಾರ ಒಂಟಾರಿಯೋದಲ್ಲಿ ನಡೆದ ಪ್ರತಿಭಟನೆ ಸಂದರ್ಭ ಫೆಲೆಸ್ತೀನ್ ಧ್ವಜ ಹಿಡಿದಿದ್ದ, ಮಾಸ್ಕ್ ಧರಿಸಿದ್ದ ಪ್ರತಿಭಟನಾಕಾರರು ಮಹಾರಾಜಾ ರಂಜಿತ್ ಸಿಂಗ್ ಅವರ ಪ್ರತಿಮೆ ಸ್ಥಾಪಿಸಿದ್ದ ಪೀಠದ ಮೇಲೇರಿ, ರಂಜಿತ್ ಸಿಂಗ್ ಅವರ ಕುದುರೆಯ ಕುತ್ತಿಗೆಗೆ ಫೆಲೆಸ್ತೀನ್ ದೇಶದ ಸಾಂಪ್ರದಾಯಕ ಸ್ಕಾರ್ಫ್ ಅನ್ನು ಹೊದಿಸಿದ್ದಾರೆ. ಮತ್ತೊಬ್ಬ ವ್ಯಕ್ತಿ ಈ ಘಟನೆಯನ್ನು ಚಿತ್ರೀಕರಿಸುತ್ತಿರುವುದಾಗಿ ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಸಿಖ್ ಚಕ್ರವರ್ತಿಯಾಗಿದ್ದ ಪೂಜ್ಯ ಭಾರತೀಯ ರಾಜನ ಪ್ರತಿಮೆಯನ್ನು ವಿರೂಪಗೊಳಿಸಿರುವುದು ದ್ವೇಷಾಪರಾಧ ಪ್ರಕರಣವಾಗಿದೆ ಎಂದು ಹಿಂದು ಅಮೆರಿಕನ್ ಫೌಂಡೇಷನ್ ಖಂಡಿಸಿದೆ.

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News