ತಾತ್ಕಾಲಿಕ ನಿವಾಸಿಗಳಿಗೆ ಪೊಲೀಸ್ ಯರೆನ್ಸ್ ಅಗತ್ಯವಿಲ್ಲ: ಕೆನಡಾ
ಟೊರಂಟೊ: ಸ್ಟಡಿ ಪರ್ಮಿಟ್ ಸೇರಿದಂತೆ ತಾತ್ಕಾಲಿಕ ನಿವಾಸಿಗಳಾಗಿ ದೇಶವನ್ನು ಪ್ರವೇಶಿಸುವವರಿಗೆ ಪೊಲೀಸ್ ಕ್ಲಿಯರೆನ್ಸ್ ಪ್ರಮಾಣ ಪತ್ರದ ಅಗತ್ಯವಿರುವುದಿಲ್ಲ ಎಂದು ಕೆನಡಾ ಸರಕಾರ ಹೇಳಿದೆ.
ಕೆನಡಾ ಸಂಸತ್‍ನ ಪೌರತ್ವ ಮತ್ತು ವಲಸೆ ಕುರಿತ ಸ್ಥಾಯಿ ಸಮಿತಿ ಸಭೆಯಲ್ಲಿ ಭಾರತೀಯ ಕೆನಡಿಯನ್ ಸಂಸದ ಅರ್ಪಣ್ ಖನ್ನಾ ಎತ್ತಿದ ಪ್ರಶ್ನೆಗೆ ಉತ್ತರಿಸಿದ ವಲಸೆ, ನಿರಾಶ್ರಿತರು ಮತ್ತು ಪೌರತ್ವ ಇಲಾಖೆಯ ಸಚಿವ ಮಾರ್ಕ್ ಮಿಲ್ಲರ್ `ತಾತ್ಕಾಲಿಕ ನಿವಾಸಿಗಳಿಗೆ ಅಂತಹ ಪ್ರಮಾಣಪತ್ರದ ಅಗತ್ಯವಿರುವುದಾಗಿ ನಾನು ಯಾವತ್ತೂ ಹೇಳಿಲ್ಲ' ಎಂದರು. ಇಂತಹ ಪ್ರಕರಣಗಳನ್ನು ಸರಕಾರ ಬಯೊಮೆಟ್ರಿಕ್ಸ್ ಪ್ರಕ್ರಿಯೆಯ ಮೂಲಕ, ನಮ್ಮ ಪಾಲುದಾರರು ಮತ್ತು ಪೊಲೀಸ್ ಅಂಕಿಅಂಶಗಳ ಮೂಲಕ ಪರಿಶೀಲನೆ ನಡೆಸುತ್ತದೆ. ಮೂಲ ದೇಶದಿಂದ ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ `ತಾತ್ಕಾಲಿಕ ವಿವಾಸಿಗಳಿಗೆ ಇದರ ಅಗತ್ಯವಿಲ್ಲ. ಭದ್ರತಾ ಕಾರಣಕ್ಕೆ ಅಗತ್ಯ ಎಂದು ಪೊಲೀಸ್ ಅಧಿಕಾರಿ ನಿರ್ಧರಿಸಿದರೆ ಅದರ ಅಗತ್ಯವಿರುತ್ತದೆ' ಎಂದವರು ಸ್ಪಷ್ಟಪಡಿಸಿದ್ದಾರೆ. ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರಗಳು ಎಷ್ಟು ವಿಶ್ವಾಸಾರ್ಹ ಎಂಬುದನ್ನು ನೀವೂ ಗಮನಿಸಿರಬಹುದು . ಕೆನಡಾದಲ್ಲಿ ಹತ್ಯೆಯಾದ ಖಾಲಿಸ್ತಾನ್ ಮುಖಂಡ ಹರ್ದೀಪ್ ಸಿಂಗ್ ನಿಜ್ಜಾರ್ ಪ್ರಕರಣದಲ್ಲಿ ಬಂಧಿತರಾದ ನಾಲ್ಕು ಆರೋಪಿಗಳಲ್ಲಿ ಇಬ್ಬರು ಸ್ಟಡಿ ಪರ್ಮಿಟ್ ಪಡೆದು ಕೆನಡಾಕ್ಕೆ ಆಗಮಿಸಿದವರು ' ಎಂದು ಎಂದು ಮಿಲ್ಲರ್ ಹೇಳಿದ್ದಾರೆ.