ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಅಧಿಕಾರ ಉಳಿಸಿಕೊಳ್ಳುವ ನಿರೀಕ್ಷೆ; ಮುಂದಿನ ಸರ್ಕಾರವನ್ನು ಮುನ್ನಡೆಸಲಿರುವ ಲಿಬರಲ್ ಪಕ್ಷ

Update: 2025-04-29 14:47 IST
ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಅಧಿಕಾರ ಉಳಿಸಿಕೊಳ್ಳುವ ನಿರೀಕ್ಷೆ; ಮುಂದಿನ ಸರ್ಕಾರವನ್ನು ಮುನ್ನಡೆಸಲಿರುವ ಲಿಬರಲ್ ಪಕ್ಷ

ಮಾರ್ಕ್ ಕಾರ್ನಿ (Photo credit: AP)

  • whatsapp icon

ಒಟ್ಟಾವ: ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಅವರ ಲಿಬರಲ್ ಪಕ್ಷವು ದೇಶದಲ್ಲಿ ಅಧಿಕಾರದಲ್ಲಿ ಉಳಿಯುವ ನಿರೀಕ್ಷೆಯಿದೆ. ದೇಶದಲ್ಲಿ ಮುಂದಿನ ಸರ್ಕಾರವನ್ನು ಲಿಬರಲ್ ಪಕ್ಷವೇ ಮುನ್ನಡೆಸುವ ನಿರೀಕ್ಷೆಯಿದೆ ಎಂದು ಬಿಬಿಸಿ ವರದಿ ಮಾಡಿದೆ.

ಈ ಮೂಲಕ ಲಿಬರಲ್‌ ಪಕ್ಷವು ಸತತ ನಾಲ್ಕನೇ ಬಾರಿಗೆ ಅಧಿಕಾರಕ್ಕೆ ಬರಲಿದೆ. ಸ್ಥಳೀಯ ಸಮಯದ ಪ್ರಕಾರ ಮಂಗಳವಾರ ಮುಂಜಾನೆಯ ವೇಳೆಗೆ ಸಂಪೂರ್ಣ ಫಲಿತಾಂಶಗಳು ಬಿಡುಗಡೆಯಾಗುವ ನಿರೀಕ್ಷೆಯಿದೆ.

ಕೆನಡಾ ಅಮೆರಿಕದ 51ನೇ ರಾಜ್ಯವಾಗಬೇಕು ಎಂದು ಪ್ರತಿಪಾದಿಸಿದ್ದ ಟ್ರಂಪ್ ಆಡಳಿತವು ಇತರ ದೇಶಗಳ ಜೊತೆಗೆ ಕೆನಡಾದ ಮೇಲೆ 25% ಸುಂಕಗಳನ್ನು ವಿಧಿಸಿತ್ತು. ಇದಕ್ಕೆ ಪ್ರತಿಯಾಗಿ ಕೆನಡಾ ಸರ್ಕಾರವು ಅಮೆರಿಕದ ಮೇಲೆ ಪ್ರತೀಕಾರದ ಸುಂಕಗಳನ್ನು ವಿಧಿಸಿತು.

ಕನ್ಸರ್ವೇಟಿವ್ ನಾಯಕ ಪಿಯರೆ ಪೊಯಿಲಿವ್ರೆ ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಜನಪ್ರಿಯತೆ ಕುಸಿಯುತ್ತಿರುವುದೆ ಎಂದು ಚುನಾವಣೆಯಲ್ಲಿ ಮತ ಸೆಳೆಯಲು ಪ್ರಯತ್ನಿಸಿದರು. ಟ್ರುಡೊ ರಾಜೀನಾಮೆ ನೀಡಿದ ನಂತರ, ಮಾರ್ಚ್‌ನಲ್ಲಿ ಕಾರ್ನಿ ಅವರು ಲಿಬರಲ್ ನಾಯಕರಾಗಿ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಇದು ಚುನಾವಣೆಯ ದಿಕ್ಕನ್ನು ಬದಲಾಯಿಸಿತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News