ಎಲ್‌ಎಸಿಯಲ್ಲಿನ ಖಾಲಿ ‘ರಕ್ಷಣಾ ಗ್ರಾಮ’ಗಳಿಗೆ ತನ್ನ ಪ್ರಜೆಗಳನ್ನು ಸ್ಥಳಾಂತರಿಸುತ್ತಿರುವ ಚೀನಾ; ವರದಿ
ಹೊಸದಿಲ್ಲಿ: ಚೀನಿ ಪ್ರಜೆಗಳು ಭಾರತದ ಈಶಾನ್ಯ ಗಡಿಗಳ ಸಮೀಪದಲ್ಲಿರುವ ತಮ್ಮ ಮಾದರಿ ‘ಷಿಯಾವೊಕಾಂಗ್’ ಗ್ರಾಮಗಳಲ್ಲಿ ನೆಲೆಸತೊಡಗಿದ್ದಾರೆ. ಚೀನಾ 2019ರಿಂದಲೇ ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ)ಯುದ್ದಕ್ಕೂ ಈ ಗ್ರಾಮಗಳನ್ನು ನಿರ್ಮಿಸುತ್ತಿದೆ ಎಂದು indianexpress.com ವರದಿ ಮಾಡಿದೆ.
ಚೀನಿಯರು ಕಳೆದ ಕೆಲವು ತಿಂಗಳುಗಳಿಂದ ಅರುಣಾಚಲ ಪ್ರದೇಶದ ಲೋಹಿತ್ ಕಣಿವೆ ಮತ್ತು ತವಾಂಗ್ ವಿಭಾಗದ ಎಲ್‌ಎಸಿಯ ಆಚೆಯ ತಮ್ಮ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಇಂತಹ ಎರಡು ಗ್ರಾಮಗಳಲ್ಲಿ ನೆಲೆಸತೊಡಗಿದ್ದಾರೆ ಎಂದು ವಿಷಯವನ್ನು ಬಲ್ಲ ಕೆಲವು ಅಧಿಕಾರಿಗಳು ತಿಳಿಸಿದರು.
ಚೀನಾ ಕಳೆದ ಐದು ವರ್ಷಗಳಿಂದ ಲಡಾಖ್ ಮತ್ತು ಅರುಣಾಚಲ ಪ್ರದೇಶ ಸೇರಿದಂತೆ ಟಿಬೆಟ್ ಸ್ವಾಯತ್ತ ಪ್ರದೇಶಕ್ಕೆ ಹೊಂದಿಕೊಂಡಿರುವ ಭಾರತದ ಗಡಿಯುದ್ದಕ್ಕೂ ಇಂತಹ 628 ಸುಸಜ್ಜಿತ ಗ್ರಾಮಗಳನ್ನು ನಿರ್ಮಿಸುತ್ತಿದೆ.
ಈ ಗ್ರಾಮಗಳ ನಿಖರವಾದ ಸ್ವರೂಪ ಅಸ್ಪಷ್ಟವಾಗಿದ್ದರೂ ಇವು ನಾಗರಿಕ ಮತ್ತು ಮಿಲಿಟರಿ ಉದ್ದೇಶಗಳಿಗಾಗಿ ದ್ವಿ ಬಳಕೆಯ ಮೂಲಸೌಕರ್ಯಗಳು ಎಂದು ಭಾವಿಸಲಾಗಿದೆ ಮತ್ತು ಎಲ್‌ಎಸಿಯುದ್ದಕ್ಕೂ ತನ್ನ ಪ್ರಾದೇಶಿಕ ಹಕ್ಕುಗಳ ಚೀನಿ ಪ್ರತಿಪಾದನೆಯಂತೆ ಕಂಡು ಬರುತ್ತಿದೆ. ಹೀಗಾಗಿ ಈ ಗ್ರಾಮಗಳು ಮಿಲಿಟರಿ ಕಳವಳಗಳಾಗಿ ಉಳಿದಿವೆ.
ಈವರೆಗೆ ಎಲ್‌ಎಸಿಯುದ್ದಕ್ಕೂ ಈ ಗ್ರಾಮಗಳ ಭಾಗವಾಗಿ ನಿರ್ಮಿಸಲಾಗಿರುವ ಎರಡಂತಸ್ತುಗಳ, ಬೃಹತ್ ಮತ್ತು ವಿಶಾಲ ಕಟ್ಟಡಗಳು ಖಾಲಿಯಾಗಿಯೇ ಉಳಿದುಕೊಂಡಿದ್ದವು. ಕಳೆದ ಕೆಲವು ತಿಂಗಳುಗಳಿಂದ ಚೀನಿ ಪ್ರಜೆಗಳು ಇದರಲ್ಲಿ ವಾಸವಾಗತೊಡಗಿದ್ದಾರೆ. ಅವರು ನಾಗರಿಕರೇ ಅಥವಾ ಮಿಲಿಟರಿ ಸಿಬ್ಬಂದಿಗಳೇ ಎನ್ನುವುದು ತಿಳಿದು ಬಂದಿಲ್ಲ.
ತವಾಂಗ್ ಮತ್ತು ಸಿಲಿಗುರಿ ಕಾರಿಡಾರ್ ಹೊರತುಪಡಿಸಿ ಹೆಚ್ಚಿನ ಜನವಸತಿಯುಳ್ಳ ಅಥವಾ ಮಹತ್ವದ ಸ್ಥಳಗಳಿಂದ ಎಲ್‌ಎಸಿ ತುಂಬ ದೂರವಿದ್ದರೂ ಚೀನಿಯರು ಈಶಾನ್ಯರಾಜ್ಯಗಳಿಗೆ ಹೊಂದಿಕೊಂಡಿರುವ ಎಲ್‌ಸಿಯುದ್ದಕ್ಕೂ ಮೂಲಸೌಕರ್ಯಗಳನ್ನು ನಿರ್ಮಿಸುತ್ತಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಅವರು (ಚೀನಿಯರು) ತವಾಂಗ್‌ನಲ್ಲಿ ಎಲ್‌ಎಸಿಯುದ್ದಕ್ಕೂ ಸಾಕಷ್ಟು ಮೂಲಸೌಕರ್ಯಗಳನ್ನು ನಿರ್ಮಿಸಿದ್ದಾರೆ,ಆದರೆ ಅವರು ಅಷ್ಟಕ್ಕೇ ನಿಲ್ಲಿಸಿಲ್ಲ. ಅರುಣಾಚಲ ಪ್ರದೇಶದ ಸಿಯಾಂಗ್ ಕಣಿವೆಯಂತಹ ಇತರ ಪ್ರದೇಶಗಳಲ್ಲಿಯೂ ಚೀನಿ ಮೂಲಸೌಕರ್ಯಗಳು ತ್ವರಿತವಾಗಿ ಅಭಿವೃದ್ಧಿಗೊಳ್ಳುತ್ತಿವೆ ಎಂದು ಹೇಳಿದ ಅಧಿಕಾರಿಯೋರ್ವರು,ಕಣಿವೆಗಳ ಮೂಲಕ ಸಂಪರ್ಕ ರಸ್ತೆಗಳ ಸುಧಾರಣೆ,ರಸ್ತೆಗಳು,ಸೇತುವೆಗಳು ಮತ್ತು ತಮ್ಮ ಮಾದರಿ ಗ್ರಾಮಗಳ ನಿರ್ಮಾಣ ಸೇರಿದಂತೆ ಅಸ್ತಿತ್ವದಲ್ಲಿರುವ ತಮ್ಮ ಮೂಲಸೌಕರ್ಯಗಳನ್ನು ಚೀನಿಯರು ನಿರಂತರವಾಗಿ ಉತ್ತಮಗೊಳಿಸಿದ್ದಾರೆ. ಚೀನಾ ಭೂತಾನ ಭೂಪ್ರದೇಶದಲ್ಲಿಯೂ ಗಡಿ ಗ್ರಾಮಗಳು ಸೇರಿದಂತೆ ಮೂಲಸೌಕರ್ಯಗಳನ್ನು ನಿರ್ಮಿಸುತ್ತಿದೆ ಎಂದು ಹೇಳಿದರು.
ಕಳೆದ 3-4 ವರ್ಷಗಳಿಂದ ಭಾರತವೂ ತನ್ನ ಗಡಿ ಮೂಲಸೌಕರ್ಯ ಕಾಮಗಾರಿಗಳನ್ನು ಹೆಚ್ಚಿಸಿದ್ದು,ಮುಂಚೂಣಿ ಸಂಪರ್ಕ ಸುಧಾರಣೆ, ಎಲ್‌ಎಸಿಗೆ ಪರ್ಯಾಯ ರಸ್ತೆಗಳ ನಿರ್ಮಾಣ ಮತ್ತು ಅವುಗಳ ಜೋಡಣೆ ಇವುಗಳಲ್ಲಿ ಸೇರಿವೆ.
ವೈಬ್ರಂಟ್ ವಿಲೇಜಸ್ ಕಾರ್ಯಕ್ರಮದಡಿ ಮೊದಲ ಹಂತದಲ್ಲಿ 663 ಗಡಿಗ್ರಾಮಗಳನ್ನು ಎಲ್ಲ ಸೌಲಭ್ಯಗಳೊಂದಿಗೆ ಮಾದರಿ ಗ್ರಾಮಗಳನ್ನಾಗಿ ಅಭಿವೃದ್ಧಿಗೊಳಿಸಲು ಭಾರತವು ಯೋಜಿಸಿದೆ. ಲಡಾಖ್,ಹಿಮಾಚಲ ಪ್ರದೇಶ,ಉತ್ತರಾಖಂಡ,ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶಗಳಲ್ಲಿ ಚೀನಾ ಗಡಿಗೆ ಹೊಂದಿಕೊಂಡಿರುವ ಕನಿಷ್ಠ 17 ಇಂತಹ ಗ್ರಾಮಗಳನ್ನು ಕಾರ್ಯಕ್ರಮದಡಿ ಅಭಿವೃದ್ಧಿಗಾಗಿ ಪ್ರಾಯೋಗಿಕ ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗಿ