ವಿಶ್ವದಲ್ಲಿ ಆಘಾತಕ್ಕೆ ಕಾರಣವಾಗಿರುವ ಚೀನಾದ ಹೊಸ ಅಸ್ತ್ರ; ಏನದು? ಇಲ್ಲಿದೆ ಸಮಗ್ರ ವಿವರ

ಸಾಂದರ್ಭಿಕ ಚಿತ್ರ PC: freepik
ಬೀಜಿಂಗ್: ಶಸ್ತ್ರಾಸ್ತ್ರ ತಂತ್ರಜ್ಞಾನದಲ್ಲಿ ಗಣನೀಯ ಸಾಧನೆ ಮಾಡಿರುವ ಚೀನಾ ಹೊಸದಾಗಿ ಜಲಜನಕ ಆಧರಿತ ಸ್ಫೋಟಕ ಸಾಧನವನ್ನು ಯಶಸ್ವಿಯಾಗಿ ಸ್ಫೋಟಿಸಿದೆ. ಚೀನಾದ ಶಿಪ್ ಬಿಲ್ಡಿಂಗ್ ಕಾರ್ಪೊರೇಷನ್ ಈ ವಿಶಿಷ್ಟ ಸಾಧನವನ್ನು ಅಭಿವೃದ್ಧಿಪಡಿಸಿದೆ. ಇದು ಚೀನಾದ ಮಿಲಿಟರಿ ಸಾಮರ್ಥ್ಯವನ್ನು ಒಂದು ಹೆಜ್ಜೆ ಮುಂದಕ್ಕೆ ಒಯ್ದಿದ್ದು, ಹೊಸ ಸಾಧನವು ನ್ಯೂಕ್ಲಿಯರ್ ಫ್ಯೂಷನ್ ಅವಲಂಬಿಸಿರುವ ಹಾಲಿ ಇರುವ ಹೈಡ್ರೋಜನ್ ಬಾಂಬ್ ಗಳಿಗಿಂತ ಭಿನ್ನವಾಗಿ, ಮ್ಯಾಗ್ನೇಶಿಯಂ ಹೈಡ್ರೀಡ್ ಒಳಗೊಂಡ ರಾಸಾಯನಿಕ ಕ್ರಿಯೆಯನ್ನು ಅವಲಂಬಿಸಿರುತ್ತದೆ. ಇದರ ಪರಿಣಾಮವಾಗಿ ಅತ್ಯಂತ ಶಕ್ತಿಶಾಲಿ ಬೆಂಕಿಯುಂಡೆ ಹೊರಹೊಮ್ಮಲಿದ್ದು, ಇದು ಯಾವುದೇ ಅಣು ಸಾಧನವನ್ನು ಬಳಸದೇ ಸುಸ್ಥಿರವಾಗಿ ಶಾಖವನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತದೆ.
ಚೀನಾ ಪರೀಕ್ಷಾರ್ಥ ಪ್ರಯೋಗ ನಡೆಸಿದ ಹೈಡ್ರೋಜನ್ ಬಾಂಬ್ ಕೇವಲ 2 ಕಿಲೋಗ್ರಾಂ ತೂಕವಿದ್ದು, ಸಾಂಪ್ರದಾಯಿಕ ಅಣುಬಾಂಬ್ ವ್ಯವಸ್ಥೆಗಿಂತ ಸಂಪೂರ್ಣ ಭಿನ್ನವಾಗಿ ಕಾರ್ಯ ನಿರ್ವಹಿಸಲಿದೆ. ಹಾಲಿ ಅಣುಬಾಂಬ್ ಗಳು ಅಣು ರಾಸಾಯನಿಕ ಕ್ರಿಯೆಗಳನ್ನು ಆಧರಿಸಿದ್ದರೆ, ಮ್ಯಾಗ್ನೇಶಿಯಂ ಹೈಡ್ರೇಡ್ ಬಳಸುವ ಹೊಸ ಬಾಂಬ್ ನ ಸಂಯುಕ್ತ ವಸ್ತು ಸಾಂಪ್ರದಾಯಿಕವಾಗಿ ಬಳಕೆಯಾಗುವ ಒತ್ತಡದ ಟ್ಯಾಂಕ್ ಗಳಲ್ಲಿ ಜಲಜನಕವನ್ನು ಹೆಚ್ಚಿನ ಸಾಂದ್ರತೆಯಡಿ ಹೊಂದಿರುತ್ತದೆ. ಗುಣಮಟ್ಟದ ಸ್ಫೋಟಕದಿಂದ ಅದನ್ನು ಅಗ್ನಿಸ್ಪರ್ಶ ಮಾಡಿದಾಗ ಮ್ಯಾಗ್ನೇಶಿಯಂ ಹೈಡ್ರೈಡ್, ಕ್ಷಿಪ್ರ ಉಷ್ಣ ಹೊರಸೂಸುವಿಕೆಯ ಮೂಲಕ ಜನಜನಕ ಅನಿಲವನ್ನು ಬಿಡುಗಡೆ ಮಾಡುತ್ತದೆ. ಇದು ಗಾಳಿಯಲ್ಲಿ ಮಿಶ್ರವಾದಾಗ ಬೆಂಕಿಗೆ ಕಾರಣವಾಗಲಿದ್ದು, 1000 ಡಿಗ್ರಿ ಸೆಲ್ಷಿಯಸ್ಗ ಗಿಂತಲೂ ಅಧಿಕ ಉಷ್ಣತೆಯನ್ನು ತಲುಪುವ ಬೆಂಕಿಯುಂಡೆಯನ್ನು ಸೃಷ್ಟಿಸುತ್ತದೆ. ಇದು ಟಿಎನ್ ಟಿ ಸ್ಫೋಟಕಗಳು ಉತ್ಪಾದಿಸುವ ಉಷ್ಣತೆಗಿಂತ ಅಧಿಕ.
ಸಿಎಸ್ ಎಸ್ ಸಿಯ ಮುಖ್ಯ ಸಂಶೋಧಕ ವಾಂಗ್ ಕ್ಸ್ಯುಫೆಂಗ್ ಅವರ ಪ್ರಕಾರ, "ಜಲಜನಕ ಅನಿಲ ಸ್ಫೋಟವು ಕನಿಷ್ಠ ಬೆಂಕಿ ಉತ್ಪದಿಸುವ ಶಕ್ತಿಯೊಂದಿಗೆ ಉರಿದುಕೊಳ್ಳುತ್ತದೆ ಹಾಗೂ ವಿಸ್ತೃತವಾದ ಸ್ಫೋಟ ವ್ಯಾಪ್ತಿಯನ್ನು ಪಡೆಯುತ್ತದೆ. ಜತೆಗೆ ಕ್ಷಿಪ್ರವಾಗಿ ಹೊರಮುಖ ಜ್ವಾಲೆಗಳನ್ನು ಬಿಡುಗಡೆ ಮಾಡುತ್ತದೆ" ಈ ವಿಶಿಷ್ಟ ಸ್ಫೋಟಕ ಸಾಧನವನ್ನು ಅಲ್ಯೂಮಿನಿಯಂ ಲೋಹದ ಮೂಲಕವೂ ಉರಿಸಬಹುದಾಗಿದ್ದು, ಮಿಲಿಟರಿ ಕಾರ್ಯಾಚರಣೆಯಲ್ಲಿ ನಿಖರ ಗುರಿಯನ್ನು ಸಾಧಿಸುವಲ್ಲಿ ಇದು ಸಹಕಾರಿಯಾಗಿದೆ.