ಕೊಲಂಬಿಯಾದಲ್ಲಿ ಹಳದಿ ಜ್ವರ ಉಲ್ಬಣ: ಆರೋಗ್ಯ ತುರ್ತುಪರಿಸ್ಥಿತಿ ಘೋಷಣೆ
Update: 2025-04-17 22:58 IST
ಸಾಂದರ್ಭಿಕ ಚಿತ್ರ
ಬೊಗೊಟ: ಹಳದಿ ಜ್ವರ(ಕಾಮಾಲೆ)ದ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೊಲಂಬಿಯ ಸರಕಾರ ರಾಷ್ಟ್ರವ್ಯಾಪಿ ಆರೋಗ್ಯ ತುರ್ತುಪರಿಸ್ಥತಿ ಘೋಷಿಸಿರುವುದಾಗಿ ವರದಿಯಾಗಿದೆ.
ಕಳೆದ ವರ್ಷದ ಜನವರಿಯಿಂದ ಕೊಲಂಬಿಯಾದಲ್ಲಿ ಹಳದಿ ಜ್ವರದ 74 ಪ್ರಕರಣಗಳು ದೃಢಪಟ್ಟಿದ್ದು 34 ಸಾವು ಸಂಭವಿಸಿದೆ. ಮಧ್ಯ-ಪಶ್ಚಿಮದ ಟೋಲಿಮಾದಲ್ಲಿ ಗಂಭೀರ ಪರಿಸ್ಥಿತಿಯಿದ್ದು 22 ಪ್ರಕರಣಗಳು ದೃಢಪಟ್ಟಿವೆ ಎಂದು ಆರೋಗ್ಯ ಸಚಿವ ಗಿಲೆರ್ಮೊ ಅಲ್ಫೋನ್ಸೋ ಜರಾಮಿಲೊ ಹೇಳಿದ್ದಾರೆ. ಈಡಿಸ್ ಮತ್ತು ಹೆಮಾಗೊಸ್ ಸೊಳ್ಳೆಗಳ ಕಡಿತದಿಂದ ಹರಡುವ ಹಳದಿ ಜ್ವರ ಮಾರಣಾಂತಿಕ ವೈರಲ್ ಕಾಯಿಲೆಯಾಗಿದೆ.