ಇರಾನ್‍ನ ಗ್ಯಾಸ್ ಸ್ಟೇಷನ್‍ಗಳ ಮೇಲೆ ಸೈಬರ್ ದಾಳಿ: ಇಸ್ರೇಲ್ ಮೂಲದ ಹ್ಯಾಕರ್ ಗಳ ಕೃತ್ಯ
ಟೆಲ್‍ಅವೀವ್: ಇರಾನ್‍ನ ಗ್ಯಾಸ್ ಸ್ಟೇಷನ್‍ಗಳ ಸಂಪರ್ಕ ಜಾಲವನ್ನು ಹ್ಯಾಕ್ ಮಾಡಿರುವುದಾಗಿ ಇಸ್ರೇಲ್ ಮೂಲದ ಸೈಬರ್ ವಂಚಕರ ಗುಂಪು ದಾಳಿ ನಡೆಸಿದೆ ಎಂದು ವರದಿಯಾಗಿದೆ.
ಈ ಪ್ರದೇಶದಲ್ಲಿ ಇಸ್ಲಾಮಿಕ್ ರಿಪಬ್ಲಿಕ್(ಇರಾನ್) ಮತ್ತದರ ಪ್ರತಿನಿಧಿಗಳು ನಡೆಸುತ್ತಿರುವ ಆಕ್ರಮಣಕ್ಕೆ ಪ್ರತಿಯಾಗಿ ಈ ಕೃತ್ಯ ನಡೆಸಲಾಗಿದೆ. ಬೆಂಕಿಯ ಜತೆ ಸರಸವಾಡುತ್ತಿರುವ ಖಾಮಿನೈ ಬೆಲೆ ತೆರಬೇಕು ಎಂದು ` ಪ್ರಿಡೇಟರಿ ಸ್ಪ್ಯಾರೊ' ಎಂದು ಕರೆಸಿಕೊಳ್ಳುವ ಗುಂಪು ಹೇಳಿಕೆ ನೀಡಿದೆ.
ಇರಾನ್‍ನಾದ್ಯಂತ 70%ದಷ್ಟು ಪೆಟ್ರೋಲ್ ಮತ್ತು ಗ್ಯಾಸ್ ಸ್ಟೇಷನ್‍ಗಳಲ್ಲಿ ಸಮಸ್ಯೆಯಾಗಿದೆ. ಉಳಿದ 30%ದಷ್ಟು ಗ್ಯಾಸ್ ಸ್ಟೇಷನ್‍ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದು ಸಮಸ್ಯೆಗೆ ಬಾಹ್ಯ ಹಸ್ತಕ್ಷೇಪ ಕಾರಣವಾಗಿರಬಹುದು. ಗ್ಯಾಸ್ ಅಥವಾ ತೈಲ ಒದಗಿಸಲು ತಾತ್ಕಾಲಿಕವಾಗಿ ಯಾಂತ್ರಿಕ ವ್ಯವಸ್ಥೆಯ ಬದಲು ಹಸ್ತಚಾಲಿತ ವ್ಯವಸ್ಥೆಯನ್ನು ಅನುಸರಿಸಲಾಗುತ್ತಿದೆ ಎಂದು ಇರಾನ್‍ನ ತೈಲ ಸಚಿವ ಜಾವೆದ್ ಒವ್ಜಿಯನ್ನು ಉಲ್ಲೇಖಿಸಿ `ರಾಯ್ಟರ್ಸ್' ವರದಿ ಮಾಡಿದೆ. ದೇಶದಾದ್ಯಂತ ಇಂಧನ ವ್ಯವಸ್ಥೆಯಲ್ಲಿ ಸಾಫ್ಟ್‍ವೇರ್ ಸಮಸ್ಯೆ ಉಂಟಾಗಿದ್ದು ಸಮಸ್ಯೆಯನ್ನು ಪರಿಹರಿಸಲು ತಜ್ಞರು ಕ್ರಮ ಕೈಗೊಳ್ಳುತ್ತಿದ್ದಾರೆ. ಸೈಬರ್ ದಾಳಿಯ ಸಾಧ್ಯತೆಯನ್ನು ತಳ್ಳಿಹಾಕಲಾಗದು ಎಂದು ಇರಾನ್‍ನ ಗ್ಯಾಸ್‍ಸ್ಟೇಷನ್ ಅಸೋಸಿಯೇಷನ್‍ನ ವಕ್ತಾರರು ಮಾಹಿತಿ ನೀಡಿದ್ದಾರೆ.