ದಕ್ಷಿಣ ಚೀನಾ ಸಮುದ್ರದಲ್ಲಿ ದುಸ್ಸಾಹಸಕ್ಕೆ ಮುಂದಾಗಬೇಡಿ: ಫಿಲಿಪ್ಪೀನ್ಸ್ ಗೆ ಚೀನಾ ಎಚ್ಚರಿಕೆ

Update: 2023-12-27 17:07 GMT

ಬೀಜಿಂಗ್: ವಿದೇಶಿ ಶಕ್ತಿಗಳ ಬೆಂಬಲದಿಂದ ದಕ್ಷಿಣ ಚೀನಾ ಸಮುದ್ರದಲ್ಲಿ ದುಸ್ಸಾಹಸಕ್ಕೆ ಮುಂದಾಗಬಾರದು. ದಕ್ಷಿಣ ಚೀನಾ ಸಮುದ್ರದಲ್ಲಿ ಫಿಲಿಪ್ಪೀನ್ಸ್ನ ಕ್ರಮಗಳು ಅತ್ಯಂತ ಅಪಾಯಕಾರಿಯಾಗಿದೆ ಎಂದು ಚೀನಾದ ವಿದೇಶಾಂಗ ಇಲಾಖೆ ಫಿಲಿಪ್ಪೀನ್ಸ್ ಗೆ ಎಚ್ಚರಿಕೆ ನೀಡಿದೆ.

ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಪ್ರದೇಶವನ್ನು ಫಿಲಿಪ್ಪೀನ್ಸ್ ಪದೇ ಪದೇ ಉಲ್ಲಂಘಿಸುತ್ತಿದೆ. ಸುಳ್ಳು ಮಾಹಿತಿಯನ್ನು ಹರಡುತ್ತಿದೆ ಮತ್ತು ಸಮಸ್ಯೆ ಸೃಷ್ಟಿಸಲು ಬಾಹ್ಯಶಕ್ತಿಗಳಿಗೆ ಸಹಕರಿಸುತ್ತಿದೆ ಎಂದು ಸರಕಾರಿ ಸ್ವಾಮ್ಯದ ಸುದ್ಧಿಸಂಸ್ಥೆ ಆರೋಪಿಸಿದೆ. ಸಮುದ್ರದ ಪರಿಸ್ಥಿತಿಯನ್ನು ತಪ್ಪಾಗಿ ಲೆಕ್ಕಾಚಾರ ಹಾಕಿ, ದುರುದ್ದೇಶ ಪೂರಿತ ಬಾಹ್ಯಶಕ್ತಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡರೆ ಇದನ್ನು ದೃಢವಾಗಿ ಎದುರಿಸಿ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸಲು ನಾವು ಸಮರ್ಥರಿದ್ದೇವೆ ಎಂದು ಚೀನಾ ಎಚ್ಚರಿಕೆ ನೀಡಿದೆ.

ನೆರೆಹೊರೆಯ ದೇಶಗಳು ತಮ್ಮ ನಡುವಿನ ಸಮಸ್ಯೆಯನ್ನು ಮಾತುಕತೆಯ ಮೂಲಕ ಪರಿಹರಿಸಬಹುದು. ಫಿಲಿಪ್ಪೀನ್ಸ್ ತನ್ನ ನಿಲುವು ಬದಲಿಸಿರುವುದು ದ್ವಿಪಕ್ಷೀಯ ಸಂಬಂಧ ಹದಗೆಡಲು ಕಾರಣವಾಗಿದೆ. ಆದ್ದರಿಂದ ಸರಿಯಾದ ದಾರಿಗೆ ಬರುವಂತೆ ಅವರಿಗೆ ಸಲಹೆ ನೀಡುತ್ತೇವೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News