ಸೂಯೆಝ್ ಕಾಲುವೆ ವಿಸ್ತರಣೆಯ ಪರೀಕ್ಷೆ ನಡೆಸಿದ ಈಜಿಪ್ಟ್

Update: 2024-12-29 14:48 GMT

PC : NDTV 

ಕೈರೊ: ಸಾಗಣೆಯ ಮೇಲಿನ ಪ್ರವಾಹಗಳ ಪರಿಣಾಮವನ್ನು ತಗ್ಗಿಸುವ ಹಾಗೂ ಪ್ರಮುಖ ಜಲಮಾರ್ಗದ ಸಾಮರ್ಥ್ಯವನ್ನು ಹೆಚ್ಚಿಸುವ ಪ್ರಯತ್ನದ ಭಾಗವಾಗಿ ಮಾಡಲಾಗಿರುವ ಸೂಯೆಝ್ ಕಾಲುವೆಯ ನೂತನ 10 ಕಿಮೀ ವಿಸ್ತರಣೆಯನ್ನು ಈಜಿಪ್ಟ್ ಪರೀಕ್ಷೆ ನಡೆಸಿದೆ.

ಶನಿವಾರ ಈ ವಿಸ್ತರಣಾ ಪ್ರದೇಶದಲ್ಲಿ ಎರಡು ಹಡಗುಗಳು ಸಂಚರಿಸಿದವು ಎಂದು ಸೂಯೆಝ್ ಕಾಲುವೆ ಪ್ರಾಧಿಕಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

“ಕಾಲುವೆಯ ದಕ್ಷಿಣ ಪ್ರಾಂತ್ಯದಲ್ಲಿನ ಈ ಅಭಿವೃದ್ಧಿಯು ಸಾಗಣೆಯ ಸುರಕ್ಷತೆಯನ್ನು ಹೆಚ್ಚಿಸಲಿದ್ದು, ಸಮುದ್ರದಲ್ಲಿ ಸಾಗುವ ಹಡಗುಗಳು ನೀರು ಹಾಗೂ ಗಾಳಿಯ ಒತ್ತಡದ ಪರಿಣಾಮದಿಂದ ತೊಂದರೆಗೀಡಾಗುವುದನ್ನು ತಗ್ಗಿಸುತ್ತದೆ” ಎಂದು ಪ್ರಾಧಿಕಾರದ ಮುಖ್ಯಸ್ಥ ಒಸಾಮಾ ರೇಬೀ ಹೇಳಿದ್ದಾರೆ.

ಜಲಮಾರ್ಗದಲ್ಲಿ ಸಾಗುವ ಹಡಗುಗಳು ಬಹುತೇಕ ಬಲವಾದ ಗಾಳಿ ಹಾಗೂ ಮರಳಿನ ಬಿರುಗಾಳಿಯಿಂದಾಗಿ ಮುಳುಗಿ ನಿಂತು ಹೋಗುತ್ತಿದ್ದವು. 2011ರಲ್ಲಿ ಎವರ್ ಗಿವನ್ ಎಂಬ ಬೃಹತ್ ಕಂಟೈನರ್ ಹಡಗೊಂದು ಕಾಲುವೆಯಲ್ಲಿ ಓರೆಯಾಗಿ ನಿಂತುಕೊಂಡಿದ್ದರಿಂದ, ಸುಮಾರು ಒಂದು ವಾರ ಕಾಲ ವ್ಯಾಪಾರ-ವಹಿವಾಟಿಗೆ ತೊಂದರೆಯುಂಟಾಗಿತ್ತು. ಇದರಿಂದಾದ ವಿಳಂಬದಿಂದಾಗಿ ಕೋಟಿಗಟ್ಟಲೆ ಡಾಲರ್ ನಷ್ಟವಾಗಿತ್ತು.

ಈ ಹಿನ್ನೆಲೆಯಲ್ಲಿ ಕಾಲುವೆಯನ್ನು ನೂತನವಾಗಿ ವಿಸ್ತರಿಸಲಾಗಿದ್ದು, “ ವಿಸ್ತರಣೆಯು ಪ್ರತಿ ದಿನ ಕಾಲುವೆಯ ಸಾಮರ್ಥ್ಯವನ್ನು ಆರರಿಂದ ಎಂಟು ಹಡಗುಗಳಿಗೆ ಹೆಚ್ಚಿಸಲಿದೆ ಹಾಗೂ ಈ ಮಾರ್ಗವನ್ನು ನೂತನ ಸಾಗಣೆ ನಕ್ಷೆಗಳನ್ನು ಬಿಡುಗಡೆ ಮಾಡಿದ ನಂತರ ಮುಕ್ತಗೊಳಿಸಲಾಗುವುದು” ಎಂದು ರೇಬೀ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News