ಭಾರತದಲ್ಲಿ ಹೂಡಿಕೆಗೆ ಎಲಾನ್ ಮಸ್ಕ್ ಆಸಕ್ತಿ

Update: 2024-06-08 16:54 GMT

ಎಲಾನ್ ಮಸ್ಕ್ | Photo : PTI

ನ್ಯೂಯಾರ್ಕ್ : ದಾಖಲೆಯ ಮೂರನೇ ಅವಧಿಗೆ ಭಾರತದ ಪ್ರಧಾನಿಯಾಗಿ ಮರು ಆಯ್ಕೆಗೊಂಡ ನರೇಂದ್ರ ಮೋದಿಯನ್ನು ಅಭಿನಂದಿಸಿರುವ ಟೆಸ್ಲಾ ಮತ್ತು ಸ್ಪೇಸ್ಎಕ್ಸ್ ಸಿಇಒ ಎಲಾನ್ ಮಸ್ಕ್, ತಮ್ಮ ಸಂಸ್ಥೆಗಳು ಭಾರತದಲ್ಲಿ ಶೀಘ್ರವೇ ಹೂಡಿಕೆ ಮಾಡಲು ಬಯಸಿವೆ ಎಂದಿದ್ದಾರೆ.

ತೀವ್ರ ಕಾರ್ಯಭಾದ್ಯತೆಗಳ ಕಾರಣದಿಂದ ತನ್ನ ಪ್ರಸ್ತಾವಿತ ಭಾರತ ಭೇಟಿಯನ್ನು ಮುಂದೂಡುವುದಾಗಿ ಎಪ್ರಿಲ್ನಲ್ಲಿ ಮಸ್ಕ್ ಹೇಳಿದ್ದರು. ಕಳೆದ ವರ್ಷದ ಜೂನ್ನಲ್ಲಿ ಅಮೆರಿಕದಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾಗಿದ್ದ ಮಸ್ಕ್, ಶೀಘ್ರವೇ ಟೆಸ್ಲಾ ಭಾರತದ ಮಾರುಕಟ್ಟೆ ಪ್ರವೇಶಿಸುವ ವಿಶ್ವಾಸ ವ್ಯಕ್ತಪಡಿಸಿದ್ದರು. ಭಾರತದಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಟೆಸ್ಲಾ ಬಯಸಿದ್ದು ಸ್ಟಾರ್ಲಿಂಕ್ ಜತೆಗೆ ದೊಡ್ಡ ಪ್ರಮಾಣದ ಹೂಡಿಕೆಗಳನ್ನು ಮಾಡುವ ಸಾಧ್ಯತೆಯಿದೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News