ಎಲಾನ್ ಮಸ್ಕ್, ವಿವೇಕ್ ರಾಮಸ್ವಾಮಿಗೆ ಟ್ರಂಪ್‌ ಸರಕಾರದಲ್ಲಿ ಉನ್ನತ ಹುದ್ದೆ!

Update: 2024-11-13 08:15 GMT

Photo credit: AP

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಲಾನ್ ಮಸ್ಕ್ ಮತ್ತು ಅನಿವಾಸಿ ಭಾರತೀಯ ಉದ್ಯಮಿ ವಿವೇಕ್ ರಾಮಸ್ವಾಮಿ ಅವರಿಗೆ ಅಮೆರಿಕ ಸರ್ಕಾರದ ದಕ್ಷತೆ(DOGE) ಇಲಾಖೆಯ ಜವಾಬ್ಧಾರಿಯನ್ನು ನೀಡಿದ್ದಾರೆ.

ಟೆಸ್ಲಾ ಮಾಲಕ, ಬಿಲಿಯನೇರ್ ಎಲಾನ್ ಮಸ್ಕ್ ಮತ್ತು ಮಾಜಿ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ರಾಮಸ್ವಾಮಿ ಅವರು ಶ್ವೇತಭವನಕ್ಕೆ ಸಲಹೆ ಮತ್ತು ಮಾರ್ಗದರ್ಶನ ನೀಡಲು ಸರ್ಕಾರದ ಹೊರಗಿನಿಂದ ಕೆಲಸ ಮಾಡಲಿದ್ದಾರೆ ಎಂದು ಹೇಳಿಕೆಯಲ್ಲಿ ಟ್ರಂಪ್ ಹೇಳಿದ್ದಾರೆ. ಸರ್ಕಾರದ ಕಾರ್ಯಕ್ಷಮತೆ ಮೇಲುಸ್ತುವಾರಿ ಇಲಾಖೆ ಅಥವಾ ಸರ್ಕಾರಿ ಇಲಾಖೆಯ ಮೇಲುಸ್ತುವಾರಿಯನ್ನು ಅವರು ವಹಿಸಿಕೊಳ್ಳಲಿದ್ದಾರೆ.

ಈ ಇಬ್ಬರು ಅದ್ಭುತ ಅಮೆರಿಕನ್ನರು ‘ಸೇವ್ ಅಮೆರಿಕ’ ಚಳವಳಿಗೆ ಅಗತ್ಯವಿರುವ ಅಧಿಕಾರಶಾಹಿ ಪ್ರವೃತ್ತಿಯನ್ನು ತೆಗೆದುಹಾಕಲು, ಅನಗತ್ಯ ನಿಯಮಗಳನ್ನು ಕಿತ್ತೊಗೆಯಲು, ವ್ಯರ್ಥ ವೆಚ್ಚಗಳನ್ನು ಕಡಿತಗೊಳಿಸಲು ಹಾಗೂ ಫೆಡರಲ್ ಏಜೆನ್ಸಿಗಳನ್ನು ಪುನರ್ ರಚಿಸಲು ನೆರವಾಗಲಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ.

ಎಲಾನ್ ಮಸ್ಕ್ ಮತ್ತು ರಾಮಸ್ವಾಮಿ ಹೊರಗಿನಿಂದಲೇ ಸರ್ಕಾರಕ್ಕೆ ಸಲಹೆ, ಮಾರ್ಗದರ್ಶನವನ್ನು ನೀಡಲಿದ್ದಾರೆ. ಅಮೆರಿಕದಲ್ಲಿ ದೊಡ್ಡ ಪ್ರಮಾಣದಲ್ಲಿ ಸುಧಾರಣೆ ತರಲು ಎಲಾನ್ ಮತ್ತು ವಿವೇಕ್ ಈ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದನ್ನು ನಾನು ಎದುರು ನೋಡುತ್ತಿದ್ದೇನೆ ಎಂದು ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News