'ಎವರೆಸ್ಟ್ ಫಿಶ್‍ಕರಿ ಮಸಾಲಾ' ವಿರುದ್ಧ ಸಿಂಗಾಪುರ ಕ್ರಮ
Update: 2024-04-19 17:16 GMT
ಸಿಂಗಾಪುರ: ಭಾರತದ ಜನಪ್ರಿಯ ಉತ್ಪನ್ನ `ಎವರೆಸ್ಟ್ ಫಿಶ್‍ಕರಿ ಮಸಾಲಾ'ದಲ್ಲಿ ಅನುಮತಿಸಿರುವುದಕ್ಕಿಂತ ಅಧಿಕ ಮಟ್ಟದ ಎಥಿಲಿನ್ ಆಕ್ಸೈಡ್ ರಾಸಾಯನಿಕವಿದೆ ಎಂಬ ಕಾರಣಕ್ಕೆ ಈ ಮಸಾಲಾ ಉತ್ಪನ್ನವನ್ನು ಮಾರುಕಟ್ಟೆಯಿಂದ ಹಿಂಪಡೆಯುವಂತೆ ಸಿಂಗಾಪುರ ಆದೇಶಿಸಿದೆ.
ಎಥಿಲೀನ್ ಆಕ್ಸೈಡ್ ಅನ್ನು ಆಹಾರದಲ್ಲಿ ಬಳಸಲು ಅನುಮತಿಸಲಾಗಿಲ್ಲ ಮತ್ತು ಬ್ಯಾಕ್ಟೀರಿಯಾಗಳ ಮಾಲಿನ್ಯವನ್ನು ತಡೆಗಟ್ಟಲು ಕೃಷಿ ಉತ್ಪನ್ನಗಳ ಧೂಮೀಕರಣ(ಕೀಟನಿಯಂತ್ರಣದ ಒಂದು ವಿಧಾನ)ಕ್ಕೆ ಮಾತ್ರ ಬಳಸಲಾಗುತ್ತದೆ ಎಂದು ಸಿಂಗಾಪುರ ಫುಡ್ ಏಜೆನ್ಸಿಯ ಹೇಳಿಕೆ ತಿಳಿಸಿದ್ದು ಎವರೆಸ್ಟ್ ಫಿಶ್‍ಕರಿ ಮಸಾಲಾವನ್ನು ಆಮದು ಮಾಡಿಕೊಳ್ಳುವ ಎಸ್‍ಪಿ ಮುತ್ತಯ್ಯ ಆ್ಯಂಡ್ ಸನ್ಸ್ ಪ್ರೈ.ಲಿ. ಸಂಸ್ಥೆಗೆ ಸಿಂಗಾಪುರ ಮಾರುಕಟ್ಟೆಯಿಂದ ಉತ್ಪನ್ನವನ್ನು ತಕ್ಷಣ ವಾಪಾಸು ಪಡೆಯುವಂತೆ ಸೂಚಿಸಿದೆ.