ಮೊದಲ ಬಾರಿಗೆ ಮಹಿಳೆಯರೇ ಇರುವ ತಂಡದಿಂದ ಗಗನಯಾನ; ಬಾಹ್ಯಾಕಾಶಕ್ಕೆ ಚಿಮ್ಮಿದ ನ್ಯೂಶೆಫರ್ಡ್ ಗಗನನೌಕೆ
Update: 2025-04-14 22:22 IST
Photo Credit : Blue Origin
ವಾಷಿಂಗ್ಟನ್: ಜೆಫ್ ಬರೋಝ್ ಅವರ `ಬ್ಲೂ ಒರಿಜಿನ್' ಸಂಸ್ಥೆಯ ನ್ಯೂಶೆಫರ್ಡ್ ಗಗನನೌಕೆ ಪಶ್ಚಿಮ ಟೆಕ್ಸಾಸ್ನ ಉಡ್ಡಯನ ಕೇಂದ್ರದಿಂದ ಬಾಹ್ಯಾಕಾಶಕ್ಕೆ ಚಿಮ್ಮಿದ್ದು ಮೊದಲ ಬಾರಿಗೆ ಮಹಿಳೆಯರೇ ಇರುವ ಗಗನಯಾತ್ರಿಗಳ ತಂಡವನ್ನು ಬಾಹ್ಯಾಕಾಶಕ್ಕೆ ರವಾನಿಸಿದ ದಾಖಲೆ ಬರೆದಿದೆ.
ಈ ಕಾರ್ಯಕ್ರಮಕ್ಕೆ ಎನ್-ಎಸ್ 31 ಎಂದು ಹೆಸರಿಡಲಾಗಿದ್ದು ಪಾಪ್ ಗಾಯಕಿ ಕೇಟಿ ಪೆರಿ, ಪತ್ರಕರ್ತೆ ಗೇಯ್ಲ್ ಕಿಂಗ್ ಮತ್ತು ಜೆಫ್ ಬರೋಝ್ ಅವರ ಗೆಳತಿ ಲಾರೆನ್ ಸ್ಯಾಂಚೆಸ್, ಚಲನಚಿತ್ರ ನಿರ್ಮಾಪಕಿ ಕೆರಿಯಾನ್ ಪ್ಲಿನ್, ನಾಗರಿಕ ಹಕ್ಕುಗಳ ಕಾರ್ಯಕರ್ತೆ ಅಮಂಡಾ ನುಯ್ಗೆನ್, ಇಂಜಿನಿಯರ್ ಐಷಾ ಬೋವ್ ತಂಡದಲ್ಲಿದ್ದಾರೆ.
ಈ ಮಿಷನ್‌ಗೆ ಎನ್‌ಎಸ್–31 ಎಂದು ಹೆಸರಿಡಲಾಗಿದ್ದು, ಇದು ನ್ಯೂಶೆಪರ್ಡ್ ಗಗನನೌಕೆಯ 31ನೇ ಯಾನ.