ಅಮೆರಿಕದಲ್ಲಿ ಚಂಡಮಾರುತದ ಅಬ್ಬರ: ಮಗು ಸಹಿತ ಇಬ್ಬರು ಮೃತ್ಯು
Update: 2025-04-20 23:30 IST
Photo : X@KyleStormChaser
ವಾಷಿಂಗ್ಟನ್: ಅಮೆರಿಕದ ಓಕ್ಲಹಾಮ ಮತ್ತು ಟೆಕ್ಸಾಸ್ನಲ್ಲಿ ಚಂಡಮಾರುತ ಮತ್ತು ಪ್ರವಾಹದ ಅಬ್ಬರದಿಂದ 12 ವರ್ಷದ ಬಾಲಕ ಹಾಗೂ ಮಹಿಳೆಯೊಬ್ಬರು ಸಾವನ್ನಪ್ಪಿದ್ದು ವ್ಯಾಪಕ ನಾಶ-ನಷ್ಟ ಉಂಟಾಗಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಶನಿವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದು ಎರಡು ಕಾರುಗಳು ನೆರೆನೀರಲ್ಲಿ ಮುಳುಗಿದ್ದರೆ ಮತ್ತೊಂದು ಕಾರು ಪ್ರವಾಹದಲ್ಲಿ ಕೊಚ್ಚಿಹೋಗಿದೆ. ಓಕ್ಲಹಾಮಾ ನಗರದ ಮೆಟ್ರೋ ಪ್ರದೇಶ ಹಾಗೂ ಉತ್ತರ ಮತ್ತು ಮಧ್ಯ ಟೆಕ್ಸಾಸ್ನಲ್ಲಿ ಗುಡುಗು, ಸಿಡಿಲು, ಸುಂಟರಗಾಳಿಯ ಸಹಿತ ಮಳೆಯಾಗಿದೆ. ಓಕ್ಲಹಾಮಾದ ಅಡಾ ಪ್ರದೇಶದಲ್ಲಿ ಬೃಹತ್ ಗಾತ್ರದ ಮರಗಳು ಉರುಳಿಬಿದ್ದು ಹಲವು ಕಟ್ಟಡಗಳಿಗೆ ಹಾನಿಯಾಗಿವೆ. ಟೆಕ್ಸಾಸ್ನಲ್ಲಿ ಸುಂಟರ ಗಾಳಿಯಿಂದಾಗಿ ಹಲವು ವಿಮಾನಗಳ ಪ್ರಯಾಣ ವಿಳಂಬಗೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.