ನ್ಯೂಯಾರ್ಕ್: ನಾಲ್ವರು ಭಾರತೀಯ ಅಮೆರಿಕನ್ನರಿಗೆ ಪುರಸ್ಕಾರ

Update: 2024-03-25 16:12 GMT

Photo : X/@IndiainNewYork

ನ್ಯೂಯಾರ್ಕ್: `ಬಿಹಾರ ದಿವಸ' ಕಾರ್ಯಕ್ರಮದ ಸಂದರ್ಭ ನ್ಯೂಯಾರ್ಕ್‍ನಲ್ಲಿರುವ ಭಾರತೀಯ ಅಮೆರಿಕನ್ ಸಮುದಾಯದ ವತಿಯಿಂದ ಬಿಹಾರ ಮೂಲದ ನಾಲ್ವರು ಪ್ರಮುಖರನ್ನು ಗೌರವಿಸಲಾಗಿದೆ.

ನ್ಯೂಯಾರ್ಕ್‍ನಲ್ಲಿ ಭಾರತದ ಕಾನ್ಸುಲರ್ ಕಚೇರಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಅಸಾಧಾರಣ ಸಾಧನೆ ಮಾಡಿರುವ ಮತ್ತು ಕೊಡುಗೆ ನೀಡಿರುವ `ಹಾಲ್ಟೆಕ್ ಇಂಟರ್‍ನ್ಯಾಷನಲ್'ನ ಸ್ಥಾಪಕ ಡಾ. ಕ್ರಿಸ್ ಸಿಂಗ್, ವಿಪ್ರೋದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮಿತ್ ಚೌಧರಿ, `ಪ್ರಾಣ್' ಮೆಡಿಕಲ್ ಗ್ರೂಪ್ ನ ಸ್ಥಾಪಕ ಡಾ. ದಿನೇಶ್ ರಂಜನ್ ಮತ್ತು `ನ್ಯೂಟ್ರಿವೆಟ್ ಫಾರ್ಮ್‍ಕ್ಯಾರ್'ನ ಅಭಿನವ್ ಅತುಲ್‍ರನ್ನು `ಬಿಹಾರ ವಿಶ್ವಗೌರವ ಸಮ್ಮಾನ್' ನೀಡಿ ಗೌರವಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News