ಗಾಝಾ: ಇಸ್ರೇಲ್ ದಾಳಿಯಲ್ಲಿ 19 ಮಂದಿ ಮೃತ್ಯು

Update: 2025-04-08 23:20 IST
ಗಾಝಾ: ಇಸ್ರೇಲ್ ದಾಳಿಯಲ್ಲಿ 19 ಮಂದಿ ಮೃತ್ಯು

PC : aljazeera.com

  • whatsapp icon

ಗಾಝಾ: ಸೋಮವಾರ ತಡರಾತ್ರಿ ಫೆಲೆಸ್ತೀನ್ ಪ್ರದೇಶದಾದ್ಯಂತ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 19 ಮಂದಿ ಮೃತಪಟ್ಟಿದ್ದು ಇತರ ಹಲವರು ಗಾಯಗೊಂಡಿರುವುದಾಗಿ ಗಾಝಾದ ನಾಗರಿಕ ರಕ್ಷಣಾ ಏಜೆನ್ಸಿ ಮಂಗಳವಾರ ಹೇಳಿದೆ.

ಮಧ್ಯ ಗಾಝಾದ ಡೀರ್ ಎಲ್-ಬಲಾಹ್‍ ನಲ್ಲಿ ಇಸ್ರೇಲ್‍ನ ಕ್ಷಿಪಣಿ ಮನೆಯೊಂದಕ್ಕೆ ಅಪ್ಪಳಿಸಿದ್ದು 5 ಮಕ್ಕಳು ಹಾಗೂ 4 ವಯಸ್ಕರು ಸಾವನ್ನಪ್ಪಿದ್ದಾರೆ. ಗಾಝಾ ನಗರ ಮತ್ತು ಉತ್ತರದ ಬೀತ್ ಲಾಹಿಯಾದಲ್ಲಿ ತಡರಾತ್ರಿ ನಡೆದ ಎರಡು ಪ್ರತ್ಯೇಕ ದಾಳಿಗಳಲ್ಲಿ ಒಟ್ಟು 10 ಮಂದಿ ಮೃತಪಟ್ಟಿದ್ದಾರೆ ಎಂದು ನಾಗರಿಕ ಭದ್ರತಾ ಏಜೆನ್ಸಿಯ ವಕ್ತಾರ ಮಹ್ಮೂದ್ ಬಸ್ಸಾಲ್‍ರನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಈ ಮಧ್ಯೆ, ಗಾಝಾದ ಖಾನ್ ಯೂನಿಸ್ ಪ್ರದೇಶದಲ್ಲಿ ಪತ್ರಕರ್ತರು ಬಳಸುತ್ತಿದ್ದ ಶಿಬಿರದ ಮೇಲೆ ಸೋಮವಾರ ನಡೆಸಿದ ದಾಳಿಯಲ್ಲಿ ಸಾವನ್ನಪ್ಪಿದ ಅಹ್ಮದ್ ಮನ್ಸೂರ್ ಪತ್ರಕರ್ತರ ಸೋಗಿನಲ್ಲಿದ್ದ ಹಮಾಸ್ ಕಾರ್ಯಕರ್ತ ಎಂದು ಇಸ್ರೇಲ್ ಸೇನೆ ಪ್ರತಿಪಾದಿಸಿದೆ.

ಹಸನ್ ಅಬ್ದೆಲ್ ಫತಾಹ್ ಮುಹಮ್ಮದ್ ಅಸ್ಲಿಹ್ ಎಂಬ ನಿಜ ನಾಮಧೇಯ ಹೊಂದಿರುವ ಹಮಾಸ್ ಕಾರ್ಯಕರ್ತನನ್ನು ಗುರಿಯಾಗಿಸಿ ದಾಳಿ ನಡೆದಿದೆ. ಈತ ಪ್ರೆಸ್ ಸಂಸ್ಥೆಯ ಮಾಲಕನಾಗಿದ್ದು ಇಸ್ರೇಲ್ ಪ್ರದೇಶದೊಳಗೆ ನುಸುಳಿ ಹಲವಾರು ಹತ್ಯೆಗಳನ್ನು ನಡೆಸಿದ್ದ ಎಂದು ಇಸ್ರೇಲ್ ಸೇನೆಯ ಹೇಳಿಕೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News