ಕ್ರೂರ ಯುದ್ಧದ `ಶಕ್ತಿಯುತ' ಪ್ರಸಾರ |ಗಾಝಾ ಪತ್ರಕರ್ತರಿಗೆ ಪ್ರತಿಷ್ಠಿತ ಪ್ರಶಸ್ತಿ
Update: 2024-11-29 15:47 GMT
ಲಂಡನ್: ಗಾಝಾದ ವೀಡಿಯೊ ಪತ್ರಕರ್ತರಾದ ಬೆಲಾಲ್ ಅಲ್ಸಬಾಗ್ ಮತ್ತು ಯೂಸುಫ್ ಹಸ್ಸೌನಾ ಅವರು ಫೆಲೆಸ್ತೀನಿಯನ್ ಪ್ರದೇಶದಲ್ಲಿನ ಕ್ರೂರ ಯುದ್ಧದ `ಶಕ್ತಿಯುತ' ಪ್ರಸಾರಕ್ಕಾಗಿ ಪ್ರತಿಷ್ಠಿತ ರೋರಿ ಪೆಕ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಮಾಸ್ಕೋದಲ್ಲಿ 1993ರಲ್ಲಿ ಕರ್ತವ್ಯದಲ್ಲಿದ್ದಾಗ ಸಾವನ್ನಪ್ಪಿದ ವೀಡಿಯೊ ಪತ್ರಕರ್ತ ರೋರಿ ಪೆಕ್ ಅವರ ಸ್ಮರಣಾರ್ಥ ಈ ಪ್ರಶಸ್ತಿಯನ್ನು 1995ರಿಂದ ನೀಡಲಾಗುತ್ತಿದೆ. ಫ್ರಾನ್ಸ್ ಮೂಲದ ಏಜೆನ್ಸ್ ಫ್ರಾನ್ಸ್- ಪ್ರೆಸ್‍ನ ವೀಡಿಯೊ ಪತ್ರಕರ್ತರಾದ ಅಲ್ಸಬಾಗ್(33 ವರ್ಷ) ಮತ್ತು ಹಸ್ಸೌನಾ (47 ವರ್ಷ) ಅವರು ಗಾಝಾದಲ್ಲಿನ ವಿನಾಶಕಾರಿ ಸಂಘರ್ಷದ ಕುರಿತು ಸಲ್ಲಿಸಿದ ವೀಡಿಯೊ ವರದಿಗಾಗಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. `ಇದು ಅತ್ಯುನ್ನತ ಕ್ರಮದ ವೀಡಿಯೊ ವರದಿಯಾಗಿದೆ. ಕೇವಲ ಬ್ರೇಕಿಂಗ್ ನ್ಯೂಸ್ ಸುದ್ದಿಗಳ ಪರಿಶೀಲನಾ ಪಟ್ಟಿಯಲ್ಲ. ಸಹಾನುಭೂತಿ, ಧೈರ್ಯ ಮತ್ತು ಪ್ರತಿಭೆಯೊಂದಿಗೆ ಶಕ್ತಿಯುತ ವರದಿಗಾರಿಕೆಯಾಗಿದೆ' ಎಂದು ತೀರ್ಪುಗಾರರು ಹೇಳಿದ್ದಾರೆ.