ಗಾಝಾ ಕದನ ವಿರಾಮ ಯೋಜನೆಗೆ ಅಮೆರಿಕ ಖಾತರಿ ನೀಡಲಿ : ಹಮಾಸ್ ಆಗ್ರಹ

Update: 2024-06-13 07:04 GMT

ಸಾಂದರ್ಭಿಕ ಚಿತ್ರ PC : NDTV

ಗಾಝಾ: ಗಾಝಾದಲ್ಲಿ ಶಾಶ್ವತ ಕದನ ವಿರಾಮ ಜಾರಿ ಮತ್ತು ಗಾಝಾ ಪಟ್ಟಿಯಿಂದ ಇಸ್ರೇಲ್ ಪಡೆಗಳ ಸಂಪೂರ್ಣ ವಾಪಸಾತಿಯ ಬಗ್ಗೆ ಅಮೆರಿಕ ಖಾತರಿ ನೀಡಿದರೆ ತಾನು ಗಾಝಾ ಯೋಜನೆಗೆ ಸಹಿ ಹಾಕುವುದಾಗಿ ಹಮಾಸ್ ಸ್ಪಷ್ಟಪಡಿಸಿದೆ ಎಂದು ಮೂಲಗಳು ಹೇಳಿವೆ.

ಗಾಝಾದಲ್ಲಿ 8 ತಿಂಗಳಿಂದ ಮುಂದುವರಿದಿರುವ ಯುದ್ಧವನ್ನು ಅಂತ್ಯಗೊಳಿಸುವ 3 ಹಂತದ ಕದನವಿರಾಮ ಪ್ರಸ್ತಾವನೆಗೆ ಹಮಾಸ್ ಮಂಗಳವಾರ ಪ್ರತಿಕ್ರಿಯೆ ನೀಡಿರುವುದಾಗಿ ಮಧ್ಯಸ್ಥಿಕೆ ವಹಿಸಿರುವ ಖತರ್ ಮತ್ತು ಈಜಿಪ್ಟ್ ಹೇಳಿವೆ. ಇಸ್ರೇಲ್ ಈ ಪ್ರಸ್ತಾವನೆಯನ್ನು ಒಪ್ಪಿರುವುದಾಗಿ ಅಮೆರಿಕ ಹೇಳಿದ್ದರೂ ಇಸ್ರೇಲ್ ಅಧಿಕೃತ ಹೇಳಿಕೆ ನೀಡಿಲ್ಲ. ಪ್ರಸ್ತಾವಿತ ಕದನ ವಿರಾಮ ಯೋಜನೆಯ ಪ್ರಕಾರ, ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಸ್ವಯಂಚಾಲಿತ ಪರಿವರ್ತನೆಯ ಭರವಸೆ ಮತ್ತು ಅಮೆರಿಕದ ಖಾತರಿಯನ್ನು ಹಮಾಸ್ ಬಯಸಿದೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News