ಯುದ್ಧದಲ್ಲಿ ಇವೆಲ್ಲಾ ಸಂಭವಿಸುತ್ತದೆ : ನೆರವು ಕಾರ್ಯಕರ್ತರ ಸಾವಿಗೆ ನೆತನ್ಯಾಹು ಪ್ರತಿಕ್ರಿಯೆ

Update: 2024-04-02 17:26 GMT

Photo: PTI

ಟೆಲ್‍ಅವೀವ್: ಗಾಝಾ ಪಟ್ಟಿಯ ಮೇಲೆ ಸೋಮವಾರ ಇಸ್ರೇಲ್ ನಡೆಸಿದ ದಾಳಿಯಲ್ಲಿ ಸ್ಥಳೀಯರಿಗೆ ಆಹಾರ ನೆರವು ವಿತರಿಸುತ್ತಿದ್ದ 4 ವಿದೇಶಿಯರ ಸಹಿತ ಹಲವರು ಸಾವನ್ನಪ್ಪಿರುವುದನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಒಪ್ಪಿಕೊಂಡಿದ್ದಾರೆ.

ದುರದೃಷ್ಟವಶಾತ್ ಗಾಝಾದಲ್ಲಿ ನಮ್ಮ ಪಡೆ ನಡೆಸಿದ ದಾಳಿಯಲ್ಲಿ ಅಮಾಯಕ ಜನರು ಸಾವನ್ನಪ್ಪಿದ್ದಾರೆ. ಇದು ಉದ್ದೇಶಪೂರ್ವಕ ನಡೆದ ದಾಳಿಯಲ್ಲ. ಯುದ್ಧದಲ್ಲಿ ಇಂತಹ ಘಟನೆ ಸಂಭವಿಸುತ್ತದೆ. ಈ ಬಗ್ಗೆ ವಿಸ್ತ್ರತ ತನಿಖೆ ನಡೆಸುತ್ತೇವೆ. ಮತ್ತೆ ಇಂತಹ ಘಟನೆ ನಡೆಯದಂತೆ ಕ್ರಮ ಕೈಗೊಳ್ಳುತ್ತೇವೆ' ಎಂದು ನೆತನ್ಯಾಹು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News