ನ್ಯೂಯಾರ್ಕ್‌ನಲ್ಲಿ ದ್ವೇಷಪರಾಧ ಪ್ರಕರಣ: ಪೇಟಾ ಧರಿಸಿದ್ದಕ್ಕಾಗಿ ಸಿಖ್ ಬಾಲಕನಿಗೆ ಥಳಿತ

Update: 2023-10-21 23:55 IST
ನ್ಯೂಯಾರ್ಕ್‌ನಲ್ಲಿ ದ್ವೇಷಪರಾಧ ಪ್ರಕರಣ: ಪೇಟಾ ಧರಿಸಿದ್ದಕ್ಕಾಗಿ ಸಿಖ್ ಬಾಲಕನಿಗೆ ಥಳಿತ

Photo- PTI

  • whatsapp icon

ನ್ಯೂಯಾರ್ಕ್: ಪೇಟಾ ಧರಿಸಿದ್ದನೆಂಬ ಕಾರಣಕ್ಕಾಗಿ ಅಮೆರಿಕದಲ್ಲಿ ಸಿಖ್ ಬಾಲಕನ ಮೇಲೆ ಹಲ್ಲೆ ನಡೆಸಿದ 26 ವರ್ಷದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಹಾಗೂ ಆತನ ವಿರುದ್ಧ ದ್ವೇಷಪರಾಧದ ಪ್ರಕರಣ ದಾಖಲಿಸಲಾಗಿದೆ.

ನ್ಯೂಯಾರ್ಕ್ ನಗರದಲ್ಲಿ ಈ ಘಟನೆ ನಡೆದಿದ್ದು, ಬಂಧಿತ ಆರೋಪಿಯನ್ನು ಕ್ರಿಸ್ಟೋಫರ್ ಫಿಲಿಪ್ಪೆಯೂಕ್ಸ್ ಎಂದು ಗುರುತಿಸಲಾಗಿದೆ. ಈ ಹಿಂದೆ ಎರಡು ವರ್ಷಗಳ ಕಾಲ ದರೋಡೆ ಪ್ರಕರಣವೊಂದರಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದ ಆತ 2021ರ ಜುಲೈನಲ್ಲಿ ಬಿಡುಗಡೆಗೊಂಡಿದ್ದ.

ನ್ಯೂಯಾರ್ಕ್ ನಗರದ ಎಂಟಿಎ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 19 ವರ್ಷ ವಯಸ್ಸಿನ ಸಿಖ್ ಬಾಲಕನಿಗೆ ಎದುರಾದ ಫಿಲಿಪ್ಪಿಯೂಕ್ಸ್, ಆತ ಪೇಟಾ ಧರಿಸಿರುವುದನ್ನು ಪ್ರಸ್ತಾವಿಸುತ್ತಾ, ‘‘ ಈ ದೇಶದಲ್ಲಿ ನಾವು ಅದನ್ನು ತೊಡುವುದಿಲ್ಲ’’ ಎಂದು ಹೇಳಿದ. ಅಲ್ಲದೆ ಪೇಟಾವನ್ನು ತೆಗೆಯುವಂತೆಯೂ ಬಾಲಕನಿಗೆ ಒತ್ತಾಯಿಸಿದ್ದ ಮತ್ತು ಆತನ ಮುಖ, ಬೆನ್ನು ಹಾಗೂ ತಲೆಯ ಹಿಂಬದಿಗೆ ಥಳಿಸಿ ಗಾಯಗೊಳಿಸಿದ್ದಾನೆಂದು ಪೊಲೀಸರು ತಿಳಿಸಿದರು. ಬಸ್‌ನಿಂದ ಇಳಿಯುವ ಮುನ್ನ ಆರೋಪಿಯು ಬಾಲಕನ ತಲೆಯಿಂದ ಪೇಟಾವನ್ನು ಕಿತ್ತುಹಾಕಲು ಯತ್ನಿಸಿದ್ದನೆಂದು ಅವರು ಹೇಳಿದ್ದಾರೆ.

ಕಳೆದ ತಿಂಗಳು ಬ್ರೂಕ್ಲಿನ್‌ನಲ್ಲಿ ಸರಕಾರಿ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಪ್ರಕರಣದಲ್ಲೂ ಫಿಲಿಪ್ಪೆಯೂಕ್ಸ್‌ನನ್ನು ಬಂಧಿಸಲಾಗಿತ್ತೆಂದು ನ್ಯೂಯಾರ್ಕ್ ಡೈಲಿ ನ್ಯೂಸ್ ಪತ್ರಿಕೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News