ಹೌದಿಗಳಿಗೆ ಇರಾನ್ ಕುಮ್ಮಕ್ಕು: ಟ್ರಂಪ್ ಆಕ್ರೋಶ
PC : PTI
ವಾಶಿಂಗ್ಟನ್: ಯೆಮನ್‌ನ ಹೌದಿ ಹೋರಾಟಗಾರರು , ಹೇಯ ದರೋಡೆಕೋರರು ಹಾಗೂ ಕೊಲೆಗಡುಕರಾಗಿದ್ದು, ಅವರ ದಾಳಿಯನ್ನು ಭಾರೀ ಶಕ್ತಿಯೊಂದಿಗೆ ಎದುರಿಸಲಾಗುವುದು ಹಾಗೂ ಆ ಶಕ್ತಿಯು ಅಷ್ಟಕ್ಕೇ ನಿಲ್ಲುವುದೆಂಬುದಕ್ಕೆ ಖಾತರಿಯಿಲ್ಲವೆಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಅಮೆರಿಕದ ಯುದ್ಧ ನೌಕೆ ಯುಎಸ್‌ಎಸ್ ಹ್ಯಾರಿ ಟ್ರೂಮ್ಯಾನ್ ಅನ್ನು ಗುರಿಯಿರಿಸಿ ಹುದಿ ಬಂಡುಕೋರರು ಕ್ಷಿಪಣಿ,ಡ್ರೋನ್ ದಾಳಿ ನಡೆಸಿರುವ ವರದಿಗಳು ಪ್ರಕಟವಾದ ಬೆನ್ನಲ್ಲೇ ಟ್ರಂಪ್ ಅವರು ತನ್ನ ಸ್ವಂತ ಸಾಮಾಜಿಕ ಜಾಲತಾಣ ಟ್ರೂಫ್‌ನಲ್ಲಿ ಈ ಹೇಳಿಕೆ ನೀಡಿದ್ದಾರೆ. ಆದರೆ ಈ ದಾಳಿಗಳು ಗುರಿಯನ್ನು ತಲುಪಲು ವಿಫಲವಾಗಿದ್ದು, ಆ ಪ್ರದೇಶದಲ್ಲಿ ಅಮೆರಿಕದ ನೌಕೆಗಳು ಯಥಾಪ್ರಕಾರ ಸಂಚಾರವನ್ನು ನಡೆಸುತ್ತಿದೆವೆಯೆಂದು ವರದಿಗಳು ತಿಳಿಸಿವೆ.
‘‘ ಅವರ (ಹೌದಿಗಳು) ಪ್ರತಿಯೊಂದು ನಡೆಯನ್ನು ಅವರು (ಇರಾನ್) ನಿಯಂತ್ರಿಸುತ್ತಿದ್ದಾರೆ.ಅವರಿಗೆ ಶಸ್ತ್ರಾಸ್ತ್ರಗಳನ್ನು ನೀಡುತ್ತಿದ್ದಾರೆ, ಹಣ ಹಾಗೂ ಅತ್ಯಾಧುನಿಕ ಮಿಲಿಟರಿ ಉಪಕರಣವನ್ನು ಅವರಿಗೆ ಪೂರೈಕೆ ಮಾಡುತ್ತಿದ್ದಾರೆ ಹಾಗೂ ಬೇಹುಗಾರಿಕಾ ಮಾಹಿತಿಯನ್ನು ಕೂಡಾ ಒದಗಿಸುತ್ತಿದೆ. ’’ ಎಂದು ಟ್ರಂಪ್ ಅವರು ತನ್ನ ಸಾಮಾಜಿಕ ಜಾಲತಾಣ ಟ್ರೂಥ್‌ನಲ್ಲಿ ಹೇಳಿದ್ದಾರೆ.