ಮಾನವೀಯ ಯುದ್ಧವಿರಾಮ: ಈಜಿಪ್ಟ್ನಲ್ಲಿ ಮಾತುಕತೆ ಪ್ರಗತಿಯಲ್ಲಿ

Update: 2023-11-09 17:35 GMT

Photo- PTI

ಕೈರೊ: ಹಮಾಸ್‍ನ ವಶದಲ್ಲಿರುವ 12 ಒತ್ತೆಯಾಳುಗಳ ಬಿಡುಗಡೆಗೆ ಪ್ರತಿಯಾಗಿ ಗಾಝಾದಲ್ಲಿ ಮೂರು ದಿನಗಳ ಮಾನವೀಯ ಕದನವಿರಾಮಕ್ಕೆ ಅವಕಾಶ ನೀಡುವ ಒಪ್ಪಂದದ ಬಗ್ಗೆ ಈಜಿಪ್ಟ್ನಲ್ಲಿ ಮಾತುಕತೆ ಪ್ರಗತಿಯಲ್ಲಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ `ಅಸೋಸಿಯೇಟೆಡ್ ಪ್ರೆಸ್' ವರದಿ ಮಾಡಿದೆ.

ಖತರ್, ಈಜಿಪ್ಟ್ ಮತ್ತು ಅಮೆರಿಕದ ಮಧ್ಯಸ್ಥಿಕೆಯಲ್ಲಿ ನಡೆಯುತ್ತಿರುವ ಮಾತುಕತೆಯು ಮಧ್ಯಪ್ರಾಚ್ಯ ವಲಯದ ವಿಭಿನ್ನ ಪಕ್ಷಗಳನ್ನು ಒಳಗೊಂಡಿರುವುದರಿಂದ ಅತ್ಯಂತ ಸಂಕೀರ್ಣವಾಗಿದೆ. ಈ ವಾರ ಕೈರೊಗೆ ಭೇಟಿ ನೀಡಿರುವ ಸಿಐಎ ಮುಖ್ಯಸ್ಥ ಮತ್ತು ಇಸ್ರೇಲ್ ನಿಯೋಗದ ಜತೆ ಒಪ್ಪಂದದ ವಿವರವನ್ನು ಚರ್ಚಿಸಲಾಗಿದೆ ಎಂದು ವರದಿ ಹೇಳಿದೆ.

ಈ ಒಪ್ಪಂದವು ಫೆಲೆಸ್ತೀನ್‍ನ 2.3 ದಶಲಕ್ಷ ಜನರ ಹದಗೆಟ್ಟ ಪರಿಸ್ಥಿತಿಯನ್ನು ಸುಧಾರಿಸಲು, ಮುತ್ತಿಗೆಗೆ ಒಳಗಾದ ಪ್ರದೇಶಕ್ಕೆ ಇಂಧನ, ಆಹಾರ ಮತ್ತಿತರ ಅಗತ್ಯದ ವಸ್ತುಗಳನ್ನು ಪೂರೈಸಲು ಅವಕಾಶ ಒದಗಿಸಲಿದೆ. ಒತ್ತೆಯಾಳುಗಳ ಬಿಡುಗಡೆಯ ಪ್ರಮಾಣವನ್ನು ಆಧರಿಸಿ ಮಾನವೀಯ ವಿರಾಮದ ಅವಧಿಯನ್ನು ನಿರ್ಧರಿಸಬಹುದು ಎಂದು ಇಸ್ರೇಲ್ ಹೇಳುತ್ತಿದೆ. ಇದಕ್ಕೆ ಎಲ್ಲರ ಒಪ್ಪಿಗೆ ದೊರೆತರೆ ಮುಂದಿನ ದಿನಗಳಲ್ಲಿ ಇದೇ ರೀತಿಯ ಇನ್ನಷ್ಟು ಒಪ್ಪಂದ ಸಾಧ್ಯವಾಗಬಹುದು ಎಂದು ಅಮೆರಿಕದ ಅಧಿಕಾರಿಯೊಬ್ಬರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News