ಈಜಿಪ್ಟ್‌ಗೆ ವಿದೇಶಿಯರ ಸ್ಥಳಾಂತರ ಸ್ಥಗಿತಗೊಳಿಸಿದ ಹಮಾಸ್ ಸರಕಾರ

Update: 2023-11-05 23:53 IST
ಈಜಿಪ್ಟ್‌ಗೆ ವಿದೇಶಿಯರ ಸ್ಥಳಾಂತರ ಸ್ಥಗಿತಗೊಳಿಸಿದ ಹಮಾಸ್ ಸರಕಾರ

Photo- PTI

  • whatsapp icon

ಗಾಝಾ : ಗಾಯಗೊಂಡ ಕೆಲವು ಫೆಲೆಸ್ತೀನಿಯರನ್ನು ಈಜಿಪ್ಟ್‌ನ ಆಸ್ಪತ್ರೆಗಳಿಗೆ ಸ್ಥಳಾಂತರಿಸಲು ಇಸ್ರೇಲ್ ನಿರಾಕರಿಸಿದ ನಂತರ, ಗಾಝಾದ ಹಮಾಸ್ ಸರಕಾರವು ವಿದೇಶಿ ಪಾಸ್‌ಪೋರ್ಟ್ ಹೊಂದಿರುವವರನ್ನು ಈಜಿಪ್ಟ್‌ಗೆ ಸ್ಥಳಾಂತರಗೊಳಿಸುವುದನ್ನು ಶನಿವಾರ ಸ್ಥಗಿತಗೊಳಿಸಿದೆ ಎಂದು ಗಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉತ್ತರ ಗಾಝಾದ ಆಸ್ಪತ್ರೆಗಳಿಂದ ರಫಾಹ್ ಗಡಿದಾಟುವಿನ ಮೂಲಕ ಈಜಿಪ್ಟ್‌ಗೆ ಸಾಗಿಸುವವರೆಗೆ ವಿದೇಶಿ ಪಾಸ್‌ಪೋರ್ಟ್ ಹೊಂದಿರುವ ಯಾವುದೇ ವ್ಯಕ್ತಿ ಗಾಝಾ ಪಟ್ಟಿಯಿಂದ ಹೊರಹೋಗಲು ಸಾಧ್ಯವಾಗುವುದಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ. ಈಜಿಪ್ಟ್‌ನ ಆಸ್ಪತ್ರೆಗಳಿಗೆ ಗಾಯಗೊಂಡ ವ್ಯಕ್ತಿಗಳನ್ನು ಸಾಗಿಸುತ್ತಿದ್ದ ಆ್ಯಂಬುಲೆನ್ಸ್‌ಗಳ ಮೇಲಿನ ಬಾಂಬ್ ದಾಳಿಯ ಬಳಿಕ ಯಾವುದೇ ಗಾಯಗೊಂಡ ವ್ಯಕ್ತಿ ಅಥವಾ ವಿದೇಶಿ ಪಾಸ್‌ಪೋರ್ಟ್ ಹೊಂದಿರುವವರು ಈಜಿಪ್ಟ್‌ಗೆ ಆಗಮಿಸಿಲ್ಲ ಎಂದು ಈಜಿಪ್ಟ್‌ನ ಭದ್ರತಾ ಮೂಲಗಳನ್ನು ಉಲ್ಲೇಖಿಸಿ ಎಎಫ್‌ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News