ಇಂಡಿಯಾ-ಮಿಡ್ಲ್ ಈಸ್ಟ್ ಇಕನಾಮಿಕ್ ಕಾರಿಡಾರ್ ಪ್ರಸ್ತಾವನೆಯು ಹಮಾಸ್ ದಾಳಿಗೆ ಸಂಭಾವ್ಯ ಕಾರಣವಾಗಿರಬಹುದು: ಬೈಡನ್
ವಾಷಿಂಗ್ಟನ್: ಇತ್ತೀಚೆಗೆ ಘೋಷಿಸಲಾಗಿರುವ ಇಂಡಿಯಾ-ಮಿಡ್ಲ್ ಈಸ್ಟ್-ಯುರೋಪ್ ಇಕನಾಮಿಕ್ ಕಾರಿಡಾರ್ ಸಂಪೂರ್ಣ ಪ್ರಾಂತ್ಯವನ್ನು ರೈಲು, ರಸ್ತೆ ಮತ್ತು ಜಲ ಮಾರ್ಗಗಳಿಂದ ಏಕೀಕರಣಗೊಳಿಸುವುದರಿಂದ ಅಕ್ಟೋಬರ್ 7ರಂದು ಇಸ್ರೇಲ್ ಮೇಲಿನ ಹಮಾಸ್ ದಾಳಿಗೆ ಇದೂ ಒಂದು ಕಾರಣವಾಗಿರಬಹುದು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ಧಾರೆ.
ಆದರೆ ಈ ಬಗ್ಗೆ ತಮ್ಮಲ್ಲಿ ಯಾವುದೇ ಸಾಕ್ಷ್ಯವಿಲ್ಲ, ಇದು ತಮ್ಮ ಅನಿಸಿಕೆ ಎಂದು ಬೈಡನ್ ಹೇಳಿದ್ದಾರೆ. ಇಸ್ರೇಲ್‌ಗಾಗಿ ಪ್ರಾದೇಶಿಕ ಏಕೀಕರಣಕ್ಕಾಗಿ ಹಾಗೂ ಒಟ್ಟಾರೆ ಪ್ರಾದೇಶಿಕ ಏಕೀಕರಣಕ್ಕಾಗಿ ನಾವು ಮಾಡುತ್ತಿರುವ ಪ್ರಗತಿಯಿಂದ ಹೀಗಾಗಿರಬೇಕು. ಆ ಕೆಲಸ ಬಾಕಿ ಇರಿಸಲಾಗದು ಎಂದು ಆಸ್ಟ್ರೇಲಿಯಾದ ಪ್ರಧಾನಿ ಆಂಟನಿ ಅಲ್ಬನೀಸ್ ಜೊತೆಗಿನ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಬೈಡೆನ್ ಹೇಳಿದರು.
ದೆಹಲಿಯಲ್ಲಿ ಇತ್ತೀಚೆಗೆ ನಡೆದ ಜಿ20 ಶೃಂಗಸಭೆಯಲ್ಲಿ ಈ ಇಂಡಿಯಾ-ಮಿಡ್ಲ್ ಈಸ್ಟ್-ಯುರೋಪಿಯನ್ ಇಕನಾಮಿಕ್ ಕಾರಿಡಾರ್ ಸ್ಥಾಪನೆಗೆ ಭಾರತ, ಅಮೆರಿಕ, ಯುಎಇ, ಸೌದಿ ಅರೇಬಿಯಾ, ಫ್ರಾನ್ಸ್, ಜರ್ಮನಿ, ಇಟಲಿ ಮತ್ತು ಯುರೋಪಿಯನ್ ಯೂನಿಯನ್ ಸಹಿ ಹಾಕಿದ್ದವು.
ಏಶ್ಯ, ಪಶ್ಚಿಮ ಏಶ್ಯ, ಮಧ್ಯ ಪ್ರಾಚ್ಯ ಮತ್ತು ಯುರೋಪ್ ನಡುವೆ ಉತ್ತಮ ಸಂಪರ್ಕತೆ ಮೂಲಕ ಆರ್ಥಿಕ ಅಭಿವೃದ್ಧಿ ಸಾಧಿಸುವ ಉದ್ದೇಶ ಈ ಕಾರಿಡಾರಿಗಿದೆ.
ಈ ಕಾರಿಡಾರಿನ ಭಾಗವಾಗಿ ಎರಡು ಪ್ರತ್ಯೇಕ ಕಾರಿಡಾರುಗಳಿರಲಿವೆ., ಪೂರ್ವ ಕಾರಿಡಾರ್ ಭಾರತವನ್ನು ಪಶ್ಚಿಮ ಏಶ್ ಮತ್ತು ಮಧ್ಯ ಪ್ರಾಚ್ಯಕ್ಕೆ ಸಂಪರ್ಕಿಸಿದರೆ ಉತ್ತರ ಕಾರಿಡಾರ್ ಪಶ್ಚಿಮ ಏಶ್/ಮಧ್ಯ ಪ್ರಾಚ್ಯ ಮತ್ತು ಯುರೋಪ್ ನಡುವೆ ಸಂಪರ್ಕ ಕಲ್ಪಿಸಲಿದೆ.
ಈ ಕಾರಿಡಾರ್ ಭಾಗವಾಗಿ ರೈಲು ಮಾರ್ಗ ಕೂಡ ನಿರ್ಮಾಣವಾಗಲಿದೆ.