ಪ್ರತಿಸುಂಕ ಹೇರಿಕೆ ತಪ್ಪಿಸಲು ಭಾರತದ ಕ್ರಮ; ಅಮೆರಿಕ ಜೊತೆ ದ್ವಿಪಕ್ಷೀಯ ವಾಣಿಜ್ಯ ಒಪ್ಪಂದಕ್ಕೆ ಶೀಘ್ರದಲ್ಲೇ ಸಹಿ ಸಾಧ್ಯತೆ

Update: 2025-04-24 21:43 IST
ಪ್ರತಿಸುಂಕ ಹೇರಿಕೆ ತಪ್ಪಿಸಲು ಭಾರತದ ಕ್ರಮ; ಅಮೆರಿಕ ಜೊತೆ ದ್ವಿಪಕ್ಷೀಯ ವಾಣಿಜ್ಯ ಒಪ್ಪಂದಕ್ಕೆ ಶೀಘ್ರದಲ್ಲೇ ಸಹಿ ಸಾಧ್ಯತೆ

ಡೊನಾಲ್ಡ್ ಟ್ರಂಪ್ | PTI 

  • whatsapp icon

ವಾಶಿಂಗ್ಟನ್: ಭಾರತೀಯ ರಫ್ತುಗಳ ಮೇಲೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರತಿ ಸುಂಕ ಹೇರಿಕೆಯನ್ನು ತಪ್ಪಿಸಲು ಅಮೆರಿಕದ ಜೊತೆಗೆ ದ್ವಿಪಕ್ಷೀಯ ವಾಣಿಜ್ಯ ಒಪ್ಪಂದಕ್ಕೆ ಸಹಿಹಾಕಲಿರುವ ಮೊದಲ ರಾಷ್ಟ್ರ ಭಾರತವಾಗುವ ಸಾಧ್ಯತೆಯಿದೆ ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸ್ಸೆಂಟ್ ಅವರು ತಿಳಿಸಿದ್ದಾರೆ.

ಭಾರತದ ಜೊತೆಗಿನ ವ್ಯಾಪಾರಿ ಮಾತುಕತೆಗಳು ಪೂರ್ಣಗೊಳ್ಳುವ ಸನಿಹಕ್ಕೆ ಬಂದಿವೆ. ಯಾಕೆಂದರೆ ಭಾರತವು ವ್ಯಾಪಾರ ಕ್ರಮಗಳು ತುಲಾನಾತ್ಮಕವಾಗಿ ಮುಕ್ತವಾದುದಾಗಿವೆ ಎಂದು ಅವರು ಹೇಳಿದ್ದಾರೆ. ವಿಶ್ವ ಬ್ಯಾಂಕ್ ಹಾಗೂ ಅಂತಾರಾಷ್ಟ್ರೀಯ ಹಣಕಾಸು ನಿಧಿಯ ವಾರ್ಷಿಕ ಸಭೆಗಳ ಸಂದರ್ಭ ದುಂಡು ಮೇಜಿನ ಸಭೆಯಲ್ಲಿ ಮಾತನಾಡುತ್ತಿದ್ದಾಗ ಬೆಸ್ಸೆಂಟ್‌ ಅವರು ಈ ಮಾಹಿತಿ ನೀಡಿದ್ದಾರೆ.

‘‘ ಭಾರತವು ಅಲ್ಪ ಮಟ್ಟದ ಸುಂಕರಹಿತ ವಾಣಿಜ್ಯ ನಿರ್ಬಂಧಗಳನ್ನು ಹೊಂದಿದೆ. ನಗದು ದುರ್ಬಳಕೆ ಇರುವುದಿಲ್ಲ ಹಾಗೂ ಅತ್ಯಂತ ಕಡಿಮೆ ಪ್ರಮಾಣದ ಸರಕಾರಿ ಸಬ್ಸಿಡಿಗಳಿರುತ್ತದೆ. ಹೀಗಾಗಿ ಭಾರತದ ಜೊತೆ ವ್ಯವಹಾರ ಕುದುರಿಸಿಕೊಳ್ಳುವುದು ತುಂಬಾ ಸುಲಭ’’ ಎಂದು ಬೆಸ್ಸೆಂಟ್ ಅವರು ತಿಳಿಸಿರುವುದಾಗಿ ದಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ಪ್ರಸಕ್ತ ಭಾರತದ ರಫ್ತುಗಳಿಗೆ ಅಮೆರಿಕವು ಶೇ.26ರಷ್ಟು ಪ್ರತಿ ಸುಂಕವನ್ನು ವಿಧಿಸಿದೆಯಾದರೂ, ಅದನ್ನು 90 ದಿನಗಳವರೆಗೆ ಅಮಾನತಿನಲ್ಲಿರಿಸಿದೆ. ಈ ಗಡುವು ಜುಲೈ 8ರೊಳಗೆ ಮುಕ್ತಾಯಗೊಳ್ಳಲಿದೆ.

ತನ್ನ ಪತ್ನಿ ಉಷಾ ವ್ಯಾನ್ಸ್ ಹಾಗೂ ಮೂವರು ಮಕ್ಕಳೊಂದಿಗೆ ಭಾರತ ಪ್ರವಾಸಕ್ಕೆ ಆಗಮಿಸಿದ್ದ ಅಮೆರಿಕ ಉಪಾಧ್ಯಕ್ಷ ಜೆ.ಡಿ.ವಾನ್ಸ್ ಮಂಗಳವಾರ ಜೈಪುರದಲ್ಲಿ ಹೇಳಿಕೆಯೊಂದನ್ನು ನೀಡಿ ಭಾರತವು ಸುಂಕೇತರ ನಿರ್ಬಂಧಗಳನ್ನು ತಗ್ಗಿಸಬೇಕೆಂದು ಆಗ್ರಹಿಸಿದ್ದರು. ಉಭಯದೇಶಗಳ ನಡುವೆ ಬಲವಾದ ಬಾಂಧವ್ಯವನ್ನು ನಿರ್ಮಿಸುವ ಪ್ರಸ್ತಾವನೆ ಮಾಡಿದ ಅವರು ಭಾರತವು ಅಮೆರಿಕನ್ ಸರಕುಗಳು, ಇಂಧನ ಹಾಗೂ ಸೇನಾ ಉಪಕರಣಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಬೇಕೆಂದು ಕರೆ ನೀಡಿದ್ದರು

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News