ಭಾರತ- ಥಾಯ್ಲೆಂಡ್ ರಾಜತಾಂತ್ರಿಕ ಬಿಕ್ಕಟ್ಟು ಸೃಷ್ಟಿ

Update: 2024-02-29 08:37 IST
ಭಾರತ- ಥಾಯ್ಲೆಂಡ್ ರಾಜತಾಂತ್ರಿಕ ಬಿಕ್ಕಟ್ಟು ಸೃಷ್ಟಿ

Photo: India flag (PTI), Thailand flag (wikimedia)

  • whatsapp icon

ಅಬುಧಾಬಿ: ಸಾರ್ವಜನಿಕ ವಿತರಣೆ ವ್ಯವಸ್ಥೆಗಾಗಿ ಖರೀದಿಸಿದ ಅಕ್ಕಿಯನ್ನು ಭಾರತವು ರಫ್ತು ಮಾರುಕಟ್ಟೆಯನ್ನು ಕೈವಶ ಮಾಡಿಕೊಳ್ಳಲು ಬಳಸಿಕೊಳ್ಳುತ್ತಿದೆ ಎಂದು ವಿಶ್ವ ವ್ಯಾಪಾರ ಸಂಸ್ಥೆಗೆ ಥಾಯ್ಲೆಂಡ್ ರಾಯಭಾರಿ ಪಿಮ್ಚಾನೋಕ್ ವೊಂಕಾರ್ಪೋನ್ ಪಿಟ್ಫೀಲ್ಡ್, ಮಾಡಿರುವ ಆರೋಪ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣವಾಗಿದೆ.

ಭಾರತ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಪ್ರಬಲ ಪ್ರತಿಕ್ರಿಯೆ ನೀಡಿದ್ದು, ಅಗ್ನೇಯ ಏಷ್ಯಾದ ಈ ದೇಶದ ಪ್ರತಿನಿಧಿಗಳು ಇರುವ ನಿಯೋಗಗಳ ಸಂಧಾನ ಮಾತುಕತೆಗಳನ್ನು ಭಾರತ ಬಹಿಷ್ಕರಿಸಿದೆ.

ಕೆಲ ಶ್ರೀಮಂತ ದೇಶಗಳ ಪ್ರತಿನಿಧಿಗಳು ಥಾಯ್ಲೆಂಡ್ ರಾಯಭಾರಿಯ ಅಭಿಪ್ರಾಯಗಳನ್ನು ಸ್ವಾಗತಿಸಿರುವುದು ಭಾರತವನ್ನು ಕೆರಳಿಸಿದೆ. ಸಾರ್ವಜನಿಕ ದಾಸ್ತಾನು ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಪ್ರಸ್ತಾವಕ್ಕೆ ಕಳೆದ ಒಂದು ದಶಕದಿಂದ ತಡೆ ಒಡ್ಡಿರುವ ಅಮೆರಿಕ, ಯೂರೋಪಿಯನ್ ಒಕ್ಕೂಟ, ಕೆನಡಾ ಮತ್ತು ಆಸ್ಟ್ರೇಲಿಯಾದ ಜತೆ ಇದೀಗ ಥಾಯ್ಲೆಂಡ್ ಕೂಡಾ ಸೇರಿಕೊಂಡಂತಿದೆ.

ಥಾಯ್ಲೆಂಡ್ ರಾಯಭಾರಿ ಬಳಸಿದ ಭಾಷೆ ಹಾಗೂ ಅವರ ನಡವಳಿಕೆಗಳು ಆಕ್ಷೇಪಾರ್ಹ ಎಂದು ಭಾರತದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಶ್ ಗೋಯಲ್ ಅವರು ಯುಎಸ್ಟಿಆರ್ ಕ್ಯಾಥರಿನ್ ಥಾಯ್ ಮತ್ತು ಯರೋಪಿಯನ್ ಒಕ್ಕೂಟದ ಕಾರ್ಯನಿರ್ವಾಹಕ ಉಪಾಧ್ಯಕ್ಷ ವ್ಲಾದಿಸ್ ಡೊಂಬ್ರೊವಿಸ್ಕಿಸ್ ಅವರ ಬಳಿ ಅಹವಾಲು ಸಲ್ಲಿಸಿದ್ದಾರೆ.

ಥಾಯ್ಲೆಂಡ್ ರಾಯಭಾರಿ ಪ್ರಸ್ತುತಪಡಿಸಿದ ಅಂಕಿ ಅಂಶಗಳು ಸುಳ್ಳು ಎಂದು ಭಾರತ ಪ್ರತಿಪಾದಿಸಿದ್ದು, ಆಹಾರ ಭದ್ರತಾ ಹೊಣೆಗಾರಿಕೆಯನ್ನು ನಿಭಾಯಿಸುವ ಉದ್ದೇಶದಿಂದ ಶೇಕಡ 40ರಷ್ಟು ಬೆಳೆಯನ್ನು ಮಾತ್ರ ಖರೀದಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ. ಸರ್ಕಾರ ಖರೀದಿಸದೇ ಉಳಿದ ಭಾಗವನ್ನ ಮಾತ್ರವೇ ಮಾರುಕಟ್ಟೆ ದರದಲ್ಲಿ ರಫ್ತು ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News