ಗಾಝಾದಲ್ಲಿ ಕದನ ವಿರಾಮ ಘೋಷಿಸುವ ವಿಶ್ವಸಂಸ್ಥೆ ಸಾಮಾನ್ಯ ಸಭೆ ನಿರ್ಣಯದ ಪರ ಮತ ಚಲಾಯಿಸಿದ ಭಾರತ
Update: 2023-12-13 06:11 GMT
ಗಾಝಾ: ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ತಕ್ಷಣದ ಮಾನವೀಯ ಕದನ ವಿರಾಮ ಘೋಷಿಸುವ ಮತ್ತು ಎಲ್ಲಾ ಒತ್ತೆಯಾಳುಗಳನ್ನು ಬೇಷರತ್ತಾಗಿ ಬಿಡುಗಡೆ ಮಾಡುವಂತೆ ಒತ್ತಾಯಿಸುವ ಕರಡು ನಿರ್ಣಯದ ಪರವಾಗಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತ ಮತ ಚಲಾಯಿಸಿದೆ.
193 ಸದಸ್ಯರ ಸಾಮಾನ್ಯಸಭೆಯಲ್ಲಿ 153 ದೇಶಗಳು ನಿರ್ಣಯದ ಪರವಾಗಿ ಮತ ಚಲಾಯಿಸಿದರೆ ಕೇವಲ 10 ದೇಶಗಳು ಮಾತ್ರ ವಿರುದ್ಧವಾಗಿ ಮತ ಚಲಾಯಿಸಿದ್ದವು. 23 ದೇಶಗಳು ಮತದಾನದಿಂದ ಹೊರಗುಳಿದವು. ನಿರ್ಣಯವನ್ನು ವಿರೋಧಿಸಿದ ಅಮೆರಿಕ, ಇಸ್ರೇಲ್ ಜೊತೆಗೆ ಆಸ್ಟ್ರಿಯಾ, ಝೆಕ್ಚಿಯಾ, ಗ್ವಾಟೆಮಾಲಾ, ಲೈಬೀರಿಯಾ, ಮೈಕ್ರೋನ್ಸಿಯಾ, ನೌರು, ಪಪೂವಾ ನ್ಯೂ ಗ್ಯುನಿಯಾ ಮತ್ತು ಪರಗ್ವೆ ಮಾತ್ರ ನಿಂತವು.
ತಕ್ಷಣದ ಮಾನವೀಯ ಕದನ ವಿರಾಮದ ಬೇಡಿಕೆಯ ನಿರ್ಣಯವನ್ನು ಅಲ್ಜೀರಿಯಾ, ಬಹ್ರೇನ್, ಇರಾಕ್, ಕುವೈತ್, ಒಮನ್, ಖತರ್, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಫೆಲೆಸ್ತೀನ್ ಸೇರಿದಂತೆ ಹಲವಾರು ದೇಶಗಳು ಪ್ರಾಯೋಜಿಸಿದ್ದವು.