ನ್ಯೂಯಾರ್ಕ್: ಬೈಕ್ ಅಪಘಾತದಲ್ಲಿ ಭಾರತೀಯ ವಿದ್ಯಾರ್ಥಿ ಮೃತ್ಯು
Update: 2024-05-24 08:54 IST

Image Source : PTI
ನ್ಯೂಯಾರ್ಕ್: ನಗರದಲ್ಲಿ ನಡೆದ ಬೈಕ್ ಅಪಘಾತವೊಂದರಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದಾನೆ.
ದ ಸ್ಟೇಟ್ ಯುನಿವರ್ಸಿಟಿ ಆಫ್ ನ್ಯೂಯಾರ್ಕ್ ನಲ್ಲಿ ಅಧ್ಯಯನ ಮಾಡುತ್ತಿದ್ದ ಆಂಧ್ರ ಪ್ರದೇಶದ ಶ್ರೀ ಬೆಲೆಮ್ ಅಚ್ಯುತ್ ಬುಧವಾರ ಸಂಜೆ ನಡೆದ ದುರಂತದಲ್ಲಿ ಅಸು ನೀಗಿರುವುದಾಗಿ ಪೊಲೀಸರು ಹೇಳಿದ್ದಾರೆ.
"ನಿನ್ನೆ ಸಂಜೆ ನಡೆದ ಬೈಕ್ ದುರಂತದಲ್ಲಿ ಎಸ್ ಯು ಎನ್ ವೈ ವಿದ್ಯಾರ್ಥಿ ಶ್ರೀ ಬೆಲೆಮ್ ಅಚ್ಯುತ ಮೃತಪಟ್ಟಿದ್ದಾರೆ ಎಂದು ತಿಳಿದು ಅತೀವ ದುಃಖವಾಗಿದೆ" ಎಂದು ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾ ಎಕ್ಸ್ ಪೋಸ್ಟ್ನಲ್ಲಿ ಕಂಬನಿ ಮಿಡಿದಿದ್ದಾರೆ.
ಸಂತ್ರಸ್ತ ಕುಟಂಬ ಹಾಗೂ ಸ್ಥಳೀಯ ಏಜೆನ್ಸಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದು, ಪಾರ್ಥಿವ ಶರೀರವನ್ನು ಭಾರತಕ್ಕೆ ವಾಪಾಸು ಕಳುಹಿಸುವುದು ಸೇರಿದಂತೆ ಕುಟಂಬಕ್ಕೆ ಎಲ್ಲ ಅಗತ್ಯ ನೆರವು ನೀಡಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.