ಟರ್ಕಿಯಲ್ಲಿ ಇನ್‌ಸ್ಟಾಗ್ರಾಂಗೆ ನಿರ್ಬಂಧ | ನಿಗೂಢ ನಡೆಗೆ ಬಳಕೆದಾರರ ಆಕ್ರೋಶ

Update: 2024-08-02 15:03 GMT

ಅಂಕಾರ : ಮೆಟಾ ಒಡೆತನದ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನ ಬಳಕೆಗೆ ಟರ್ಕಿಯಲ್ಲಿ ನಿರ್ಬಂಧ ಹೇರಲಾಗಿದೆ ಎಂದು ಟರ್ಕಿಯ ಮಾಹಿತಿ ತಂತ್ರಜ್ಞಾನ ನಿಯಂತ್ರಕ ಪ್ರಾಧಿಕಾರ ಆದೇಶಿಸಿದೆ ಎಂದು ರಾಯಿಟರ್ಸ್‌ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಟರ್ಕಿಯ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಪ್ರಾಧಿಕಾರ ಆಗಸ್ಟ್‌ 2 ರಂದು ತನ್ನ ವೆಬ್‌ಸೈಟ್‌ನಲ್ಲಿ ಇನ್‌ಸ್ಟಾಗ್ರಾಂ ನಿರ್ಬಂಧಿಸುವ ಬಗ್ಗೆ ಪ್ರಕಟಿಸಿದೆ.

ಟರ್ಕಿ ಅಧ್ಯಕ್ಷರ ಸಂವಹನ ನಿರ್ದೇಶಕ ಅಲ್ಟುನ್‌, ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದು, ‘ಇದು ಸೆನ್ಸಾರ್‌, ಸ್ಪಷ್ಟ ಮತ್ತು ಸರಳವಾಗಿದೆ’ ಎಂದು ತಿಳಿಸಿದ್ದಾರೆ.

ಎಷ್ಟು ದಿನಗಳವರೆಗೆ ಈ ನಿರ್ಬಂಧ ಇರಲಿದೆ ಹಾಗೂ ಯಾವ ಕಾರಣಕ್ಕೆ ನಿರ್ಬಂಧ ಹೇರಲಾಗಿದೆ ಎನ್ನುವ ಬಗ್ಗೆ ಮಾಹಿತಿ ‌ನೀಡಿಲ್ಲ.

ಟರ್ಕಿಯ ಈ ನಿರ್ಧಾರದ ಕುರಿತು ಮೆಟಾ ಸಂಸ್ಥೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಟರ್ಕಿಯ ಈ ನಡೆಯಿಂದ ಕಂಪ್ಯೂಟರ್‌ ಮತ್ತು ಮೊಬೈಲ್‌ ಫೋನ್‌ಗಳಲ್ಲಿ ಇನ್‌ಸ್ಟಾಗ್ರಾಂ ಬಳಸಲು ಸಾಧ್ಯವಾಗುತ್ತಿಲ್ಲ ಎಂದು ಬಳಕೆದಾರರು ಎಕ್ಸ್‌ನಲ್ಲಿ ದೂರಿದ್ದಾರೆ.

ಹಮಾಸ್‌ನ ಪ್ರಮುಖ ಅಧಿಕಾರಿ ಇಸ್ಮಾಯಿಲ್ ಹನಿಯೆಹ್ ಅವರ ಹತ್ಯೆಯ ಕುರಿತಾದ ಪೋಸ್ಟ್‌ಗಳನ್ನು ನಿರ್ಬಂಧಿಸುವ ಉದ್ದೇಶದಿಂದ ಇನ್‌ಸ್ಟಾಗ್ರಾಂ ಬಳಕಗೆ ನಿರ್ಬಂಧ ಹೇರಿದ್ದಾರೆ ಎಂದು ಬಳಕೆದಾರರು ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News