ಗಾಝಾದಲ್ಲಿ ಮತ್ತೆ ಇಂಟರ್‌ನೆಟ್, ದೂರವಾಣಿ ಸ್ತಬ್ಧ

Update: 2023-11-01 18:23 GMT

File Photo

ರಫಾ: ಗಾಝಾದಲ್ಲಿ ಮಂಗಳವಾರ ಇಸ್ರೇಲ್ ನಡೆಸಿದ ಭೀಕರ ವಾಯುದಾಳಿಯಲ್ಲಿ ವಸತಿ ಸಂಕೀರ್ಣಗಳು ನೆಲಸಮಗೊಂಡ ಕೆಲವೇ ತಾಸುಗಳ ಆನಂತರ ನಗರಾದ್ಯಂತ ಇಂಟರ್‌ನೆಟ್ ಹಾಗೂ ದೂರವಾಣಿ ಸೇವೆ ಸ್ತಬ್ಧಗೊಂಡಿರುವುದಾಗಿ ವರದಿಯಾಗಿದೆ.

ಕಳೆದ ಐದು ದಿನಗಳಲ್ಲಿ ಗಾಝಾದಲ್ಲಿ ಇಂಟರ್‌ನೆಟ್ ಹಾಗೂ ದೂರವಾಣಿ ಸೇವೆಗಳು ಸ್ಥಗಿತಗೊಂಡಿರುವುದು ಇದು ಎರಡನೆ ಸಲವಾಗಿದ್ದು, ಇದರೊಂದಿಗೆ ಗಾಝಾ ಪ್ರದೇಶವು ಬಾಹ್ಯಜಗತ್ತಿನೊಂದಿಗೆ ಸಂಪರ್ಕ ಕಡಿದುಕೊಂಡಂತಾಗಿದೆ.

ಇಂಟರ್‌ನೆಟ್ ದೂರವಾಣಿ ಸೇವೆಗಳ ಸ್ಥಗಿತಗೊಂಡಿರುವುದರಿಂದ ತಮಗೆ ಪರಿಹಾರ ಹಾಗೂ ನೆರವು ಕಾರ್ಯಾಚರಣೆಗಳನ್ನು ನಡೆಸುವುದಕ್ಕೆ ತೀವ್ರಅಡ್ಡಿಯಾಗಿದೆ ಎಂದು ಗಾಝಾದ ನೆರವು ಸಂಸ್ಥೆಗಳು ವರದಿ ಮಾಡಿವೆ. ಗಾಝಾ ಪ್ರದೇಶದ 20.30 ಲಕ್ಷಕ್ಕೂ ಅಧಿಕ ಫೆಲೆಸ್ತೀನಿಯರು ನಿರಾಶ್ರಿತರಾಗಿದ್ದು, ಅಲ್ಲಿ ಕಳೆದ ಮೂರು ವಾರಗಳಿಂದ ಮೂಲಭೂತ ಅವಶ್ಯಕತೆಗಳ ವಸ್ತುಗಳ ತೀವ್ರ ಕೊರತೆಯುಂಟಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News