ಪರಮಾಣು ಸ್ಥಾವರಗಳ ರಕ್ಷಣೆಗೆ ಗೂಢಚಾರ ಹಡಗು ನಿಯೋಜಿಸಿದ ಇರಾನ್
Update: 2025-01-15 15:13 GMT
ಟೆಹ್ರಾನ್ : ದೇಶದ ಪರಮಾಣು ಸ್ಥಾವರಗಳ ರಕ್ಷಣೆಗಾಗಿ ಅತ್ಯಾಧುನಿಕ ಗೂಢಚಾರ ಹಡಗು `ಝಗ್ರೋಸ್' ಅನ್ನು ಇರಾನ್ ತನ್ನ ನೌಕಾಪಡೆಗೆ ಸೇರಿಸಿದೆ ಎಂದು ಸರ್ಕಾರಿ ಮಾಧ್ಯಮಗಳು ಬುಧವಾರ ವರದಿ ಮಾಡಿವೆ.
ಬುಧವಾರ ಆರಂಭಗೊಂಡ ಸೇನಾ ಕವಾಯತು ಸಂದರ್ಭ ಅನಾವರಣಗೊಳಿಸಲಾದ `ಝಗ್ರೋಸ್' ಇರಾನ್ ನಿರ್ಮಿತ ಅತ್ಯಾಧುನಿಕ ಇಲೆಕ್ಟ್ರಾನಿಕ್ ಸೆನ್ಸರ್, ಪ್ರತಿಬಂಧಕಗಳು ಹಾಗೂ ಇತರ ಸೈಬರ್ ಮತ್ತು ಗುಪ್ತಚರ ಸಾಮರ್ಥ್ಯಗಳನ್ನು ಹೊಂದಿದೆ. ಹೊಸ ಗೂಢಚಾರ ಹಡಗು ಸಮುದ್ರ ಮತ್ತು ಸಾಗರಗಳ ಆಳದಲ್ಲಿ ಇರಾನ್ ನೌಕಾಪಡೆಯ ಕಾವಲು ಕಣ್ಣಾಗಿರುತ್ತದೆ ಎಂದು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಶಹ್ರಾಮ್ ಇರಾನಿ ಹೇಳಿರುವುದಾಗಿ ವರದಿಯಾಗಿದೆ. ಮಾರ್ಚ್ ಮಧ್ಯಭಾಗದವರೆಗೆ ನಡೆಯಲಿರುವ ಸೇನಾ ಕವಾಯತು ದೇಶದ ಪ್ರಮುಖ ಪರಮಾಣು ನೆಲೆಗಳಾದ ನಟಾಂಝ್, ಫೋರ್ದೋವ್ ಮತ್ತು ಖೊಂಡಾಬ್‍ಗಳನ್ನು ರಕ್ಷಿಸುವ ಉದ್ದೇಶವನ್ನೂ ಹೊಂದಿದೆ.