ಗಾಝಾ ಪ್ರದೇಶಕ್ಕೆ ವಿದ್ಯುತ್ ಸರಬರಾಜು ಸ್ಥಗಿತ: ಇಸ್ರೇಲ್

Update: 2025-03-10 07:45 IST
ಗಾಝಾ ಪ್ರದೇಶಕ್ಕೆ ವಿದ್ಯುತ್ ಸರಬರಾಜು ಸ್ಥಗಿತ: ಇಸ್ರೇಲ್

PC: PTI

  • whatsapp icon

ಜೆರುಸಲೇಂ: ಗಾಝಾ ಪ್ರದೇಶಕ್ಕೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸುವುದಾಗಿ ಇಸ್ರೇಲ್ ಪ್ರಕಟಿಸಿದೆ. ಇದರ ಸಮಗ್ರ ಪರಿಣಾಮ ತಕ್ಷಣಕ್ಕೆ ಸ್ಪಷ್ಟವಾಗುತ್ತಿಲ್ಲವಾದರೂ ಈ ಭಾಗದ ಕುಡಿಯುವ ನೀರು ಶುದ್ಧೀಕರಣ ಘಟಕಗಳು ವಿದ್ಯುತ್ ಪಡೆಯುತ್ತಿವೆ.

ಸುಮಾರು 20 ಲಕ್ಷ ಜನರಿರುವ ಈ ಭಾಗಕ್ಕೆ ಎಲ್ಲ ಸರಕುಗಳ ಸರಬರಾಜನ್ನು ಸ್ಥಗಿತಗೊಳಿಸಿದ ಒಂದು ವಾರದ ಬಳಿಕ ಇಸ್ರೇಲ್ ಈ ಕ್ರಮಕ್ಕೆ ಮುಂದಾಗಿದೆ. ಕದನ ವಿರಾಮದ ಮೊದಲ ಹಂತದ ವಿಸ್ತರಣೆ ಮಾಡುವಂತೆ ಹಮಾಸ್ ಮೇಲೆ ಒತ್ತಡ ತರುವ ತಂತ್ರವಾಗಿ ಇಸ್ರೇಲ್ ಈ ಕ್ರಮ ಕೈಗೊಂಡಿದೆ. ಈ ಹಂತ ಕಳೆದ ವಾರ ಅಂತ್ಯವಾಗಿತ್ತು. ಧೀರ್ಘಕಾಲೀನ ಶಾಂತಿ ಬಗ್ಗೆ ಮಾತುಕತೆಯ ಭರವಸೆ ಪಡೆದ ತಕ್ಷಣ ಉಳಿದ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು ಎಂದು ಇಸ್ರೇಲ್ ಬಯಸಿದೆ.

ಹಮಾಸ್ ಈಗಾಗಲೇ ಕಠಿಣ ಎನಿಸಿದ ಎರಡನೇ ಹಂತದ ಕದನ ವಿರಾಮ ಮಾತುಕತೆ ಆರಂಭಿಸುವಂತೆ ಒತ್ತಡ ತಂದಿದೆ. ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲದೇ ಈಜಿಪ್ಟ್ ಮಧ್ಯಸ್ಥಿಕೆಯಲ್ಲಿ ನಡೆದ ಶಾಂತಿ ಮಾತುಕತೆಯನ್ನು ಕೊನೆಗೊಳಿಸುತ್ತಿರುವುದಾಗಿ ಹಮಾಸ್ ರವಿವಾರ ಸ್ಪಷ್ಟಪಡಿಸಿದ್ದು, ಎರಡನೇ ಸುತ್ತಿನ ಮಾತುಕತೆಯನ್ನು ತಕ್ಷಣ ಆರಂಭಿಸುವಂತೆ ಆಗ್ರಹಿಸಿದೆ.

ಈ ಮಧ್ಯೆ ಗಾಝಾ ಪ್ರದೇಶಕ್ಕೆ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸುವುದಾಗಿ ಇಸ್ರೇಲ್ ಪತ್ರ ಬರೆದಿದೆ. ಗಾಝಾ ಪ್ರದೇಶ ಬಹುತೇಕ ಯುದ್ಧದಿಂದ ಧ್ವಂಸವಾಗಿದ್ದು, ವಿದ್ಯುತ್ ಸರಬರಾಜಿಗೆ ಜನರೇಟಲ್ ಮತ್ತು ಸೋಲಾರ್ ಪ್ಯಾನಲ್ ಗಳನ್ನು ಬಳಸಲಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News