ಇಟಲಿ: 946 ದಶಲಕ್ಷ ಡಾಲರ್ ಮೌಲ್ಯದ ಮಾದಕ ಪದಾರ್ಥ ವಶಕ್ಕೆ
Update: 2023-07-21 23:22 IST

Photo: ಸಾಂದರ್ಭಿಕ ಚಿತ್ರ NDTV
ರೋಮ್ : ಇಟಲಿಯ ದಕ್ಷಿಣದಲ್ಲಿರುವ ಸಿಸಿಲಿ ಕಡಲತೀರದ ಬಳಿ ಸಮುದ್ರದ ನೀರಿನಲ್ಲಿ ತೇಲುತ್ತಿದ್ದ 5.3 ಟನ್ಗಳಷ್ಟು ಮಾದಕ ಪದಾರ್ಥ ಕೊಕೇನ್ ಅನ್ನು ವಶಕ್ಕೆ ಪಡೆಯಲಾಗಿದ್ದು ಐದು ಮಂದಿಯನ್ನು ಬಂಧಿಸಲಾಗಿದೆ ಎಂದು ಇಟಲಿಯ ಅಧಿಕಾರಿಗಳು ಹೇಳಿದ್ದಾರೆ.
ದಕ್ಷಿಣ ಅಮೆರಿಕಾದಿಂದ ಪ್ರಯಾಣ ಆರಂಭಿಸಿರುವ ಹಡಗು ಸಿಸಿಲಿ ಕಡಲ ತೀರ ಸಮೀಪಿಸುತ್ತಿರುವಂತೆಯೇ ಹಡಗಿನಿಂದ ಪ್ಯಾಕೆಟ್ಗಳನ್ನು ನೀರಿಗೆ ಎಸೆಯುತ್ತಿರುವ ಬಗ್ಗೆ ಕಣ್ಗಾವಲು ವಿಮಾನವು ಇಟಲಿ ಪೊಲೀಸರಿಗೆ ಮಾಹಿತಿ ನೀಡಿದೆ. ಅದರಂತೆ ಪೊಲೀಸರು ದೋಣಿಯಲ್ಲಿ ಆ ಸ್ಥಳದತ್ತ ಹೋದಾಗ ನೀರಿನಲ್ಲಿ ತೇಲುತ್ತಿದ್ದ ಪ್ಯಾಕೆಟ್ಗಳನ್ನು ಮೀನುಗಾರಿಕೆಯ ಟ್ರಾಲರ್ ಬೋಟ್ನವರು ಬಲೆ ಬಳಸಿ ಹಿಡಿಯುತ್ತಿದ್ದರು. ಈ ಪ್ಯಾಕೆಟ್ಗಳನ್ನು ಟ್ರಾಲರ್ ಬೋಟ್ನಲ್ಲಿದ್ದ ರಹಸ್ಯ ಕಂಪಾರ್ಟ್ಮೆಂಟ್ನಲ್ಲಿ ಇಡಲಾಗಿತ್ತು. ಇದರ ಒಟ್ಟು ಮೌಲ್ಯ 946 ದಶಲಕ್ಷ ಡಾಲರ್ಗಳಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ