ಬೆಲ್ಟ್ ಆ್ಯಂಡ್ ರೋಡ್ ಉಪಕ್ರಮದಿಂದ ನಿರ್ಗಮಿಸಲು ಇಟಲಿ ನಿರ್ಧಾರ

Update: 2023-09-10 16:19 GMT

Photo: ಜಾರ್ಜಿಯಾ ಮೆಲೋನಿಯ | PTI

ರೋಮ್: ಚೀನಾದ ಮಹಾತ್ವಾಕಾಂಕ್ಷೆಯ `ಬೆಲ್ಟ್ ಆ್ಯಂಡ್ ರೋಡ್' ಉಪಕ್ರಮದಲ್ಲಿ ಹೂಡಿಕೆ ಮಾಡುವ ಒಪ್ಪಂದದಿಂದ ಹೊರನಡೆಯಲು ಇಟಲಿ ಯೋಜಿಸಿದೆ ಎಂದು ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿಯನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಭಾರತದಲ್ಲಿ ನಡೆದ ಜಿ20 ಶೃಂಗಸಭೆಯ ನೇಪಥ್ಯದಲ್ಲಿ ಚೀನಾದ ಪ್ರೀಮಿಯರ್ ಲಿ ಕ್ವಿಯಾಂಗ್ ಜತೆ ಈ ಬಗ್ಗೆ ಮೆಲೋನಿ ಪ್ರಸ್ತಾವಿಸಿದ್ದಾರೆ. ಬೆಲ್ಟ್ ಆ್ಯಂಡ್ ರೋಡ್ ಉಪಕ್ರಮದಿಂದ ನಿರ್ಗಮಿಸಿದರೂ ಚೀನಾದೊಂದಿಗೆ ಸೌಹಾರ್ದ ಸಂಬಂಧವನ್ನು ಉಳಿಸಿಕೊಳ್ಳುವ ಬಗ್ಗೆ ಇಟಲಿ ಪ್ರಧಾನಿ ಭರವಸೆ ನೀಡಿದ್ದಾರೆ ಎಂದು ವರದಿ ತಿಳಿಸಿದೆ.

ಬೆಲ್ಟ್ ಆ್ಯಂಡ್ ರೋಡ್ ಉಪಕ್ರಮದ ಒಪ್ಪಂದಕ್ಕೆ ಇಟಲಿ 2019ರಲ್ಲಿ ಸಹಿ ಹಾಕಿತ್ತು. ಆದರೆ ಈ ಉಪಕ್ರಮದಿಂದ ಇಟಲಿಯ ವ್ಯಾಪಾರ ವಹಿವಾಟಿಗೆ ಹೆಚ್ಚಿನ ಉತ್ತೇಜನ ದೊರಕುವ ನಿರೀಕ್ಷೆ ಇಲ್ಲದ ಹಿನ್ನೆಲೆಯಲ್ಲಿ ಯೋಜನೆಯಿಂದ ಇಟಲಿ ಹಿಂದೆ ಸರಿಯಲಿದೆ ಎಂದು ಈ ವರ್ಷದ ಆರಂಭದಲ್ಲೇ ಮೆಲೋನಿ ಹೇಳಿಕೆ ನೀಡಿದ್ದರು.

ಆದರೆ ಯೋಜನೆಯಿಂದ ಹಿಂದೆ ಸರಿದರೆ ಚೀನಾದೊಂದಿಗಿನ ದ್ವಿಪಕ್ಷೀಯ ಸಂಬಂಧಕ್ಕೆ ಧಕ್ಕೆಯಾಗಬಹುದು ಎಂದು ಇಟಲಿಯಲ್ಲಿನ ಚೀನಾದ ರಾಯಭಾರಿ ಕಳೆದ ತಿಂಗಳು ಎಚ್ಚರಿಕೆ ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News