ಲಂಡನ್: ಬಿಗ್‌ಬೆನ್ ಏರಿದ ಫೆಲೆಸ್ತೀನ್ ಪರ ಪ್ರತಿಭಟನಾಕಾರ

Update: 2025-03-09 21:35 IST
ಲಂಡನ್: ಬಿಗ್‌ಬೆನ್ ಏರಿದ ಫೆಲೆಸ್ತೀನ್ ಪರ ಪ್ರತಿಭಟನಾಕಾರ

PC | NDTV

  • whatsapp icon

ಲಂಡನ್: ಕೇಂದ್ರ ಲಂಡನ್‌ ನ ವೆಸ್ಟ್‌ಮಿನಿಸ್ಟರ್‌ ನಲ್ಲಿರುವ ವಿಶ್ವವಿಖ್ಯಾತ ಬಿಗ್‌ಬೆನ್ ಗೋಪುರವನ್ನು ವ್ಯಕ್ತಿಯೊಬ್ಬ ಫೆಲೆಸ್ತೀನ್ ಧ್ವಜ ಹಿಡಿದು ಬರಿಗಾಲಿನಲ್ಲಿ ಹತ್ತಿದ್ದಾನೆ. ಬಿಗ್ ಬೆನ್ (ದೊಡ್ಡ ಗಡಿಯಾರ) ಇರುವ ಎಲಿಝಬೆತ್ ಗೋಪುರದಿಂದ ಹಲವಾರು ಮೀಟರ್ ದೂರದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಈ ವ್ಯಕ್ತಿಯು ಮಧ್ಯರಾತ್ರಿಯ ಆನಂತರ ಗೋಪುರವನ್ನೇರಿದ್ದಾನೆ.ಕಟ್ಟಡದಿಂದ ಇಳಿಯುವಂತೆ ಸಂಧಾನಕಾರರು ಬಹಳ ಸಮಯದವರೆಗೆ ಮನವೊಲಿಸಿದ ಬಳಿಕ ಆತ ಗೋಪುರದಿಂದ ಕೆಳಕ್ಕೆ ಇಳಿದಿದ್ದಾನೆ. ಆನಂತರ ಪಕ್ಕದಲ್ಲೇ ಇದ್ದ ಆ್ಯಂಬುಲೆನ್ಸ್‌ನಲ್ಲಿ ಆತನನ್ನು ಕರೆದೊಯ್ಯಲಾಯಿತು.

ಆ ವ್ಯಕ್ತಿಯನ್ನು ತುರ್ತು ಸಿಬ್ಬಂದಿಗಳು ಸಮೀಪಿಸಲು ಯತ್ನಿಸುತ್ತಿದ್ದಾಗ ಜನಜಂಗುಳಿಯುಂಟಾದ್ದರಿಂದ ನಗರದ ವೆಲ್ಟ್‌ಮಿನ್‌ಸ್ಟರ್ ಪ್ಯಾಲೇಸ್ ಪ್ರದೇಶದಲ್ಲಿ ವಾಹನಸಂಚಾರ ಸ್ತಬ್ಧಗೊಂಡಿತು. ಸಂಧಾನಕಾರರು ಪ್ರತಿಭಟನಾಕಾರರ ಮನವೊಲಿಸುತ್ತಲೇ ಅಗ್ನಿಶಾಮಕದಳದ ಏಣಿಯ ಮೂಲಕ ಆತನನ್ನು ಕೆಳಗಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News