ಲಂಡನ್ : ನಾಪತ್ತೆಯಾಗಿದ್ದ ಭಾರತೀಯ ವಿದ್ಯಾರ್ಥಿ ಮೃತದೇಹ ಪತ್ತೆ
ಲಂಡನ್: ಕಳೆದ ವಾರ ನಾಪತ್ತೆಯಾಗಿದ್ದ ಭಾರತೀಯ ವಿದ್ಯಾರ್ಥಿ ಗುರಶ್ಮಾನ್ ಸಿಂಗ್ ಭಾಟಿಯಾ ಅವರ ಮೃತದೇಹವು ಪೂರ್ವ ಲಂಡನ್ನ ಕ್ಯಾನರಿ ವಾರ್ಫ್ ಪ್ರದೇಶದಲ್ಲಿ ಬುಧವಾರ ರಾತ್ರಿ ಪತ್ತೆಯಾಗಿದೆ.
23 ವರ್ಷ ವಯಸ್ಸಿನ ಗುರಶಮನ್ ಸಿಂಗ್ ಭಾಟಿಯಾ ಕಳೆದ ಗುರುವಾರ ರಾತ್ರಿ ತನ್ನ ಸ್ನೇಹಿತರೊಂದಿಗೆ ವಿಹಾರಕ್ಕೆ ತೆರಳಿದ್ದಾಗ ನಾಪತ್ತೆಯಾಗಿದ್ದನೆಂದು ಲಂಡನ್ ನ ಮೆಟ್ರೋ ಪೊಲೀಸರು ತಿಳಿಸಿದ್ದಾರೆ.
ಆತನ ಪತ್ತೆಗಾಗಿ ಪೊಲೀಸರು ಭಾರೀ ಕಾರ್ಯಾಚರಣೆ ನಡೆಸಿದ್ದರು. ಸಿಸಿಟಿವಿಗಳನ್ನು ಜಾಲಾಡಿದ್ದರು ಹಾಗೂ ಹಲವಾರು ಸಾಕ್ಷಿಗಳ ವಿಚಾರಣೆ ನಡೆಸಿದ್ದರು.
ಬುಧವಾರ ಬೆಳಗ್ಗೆ ಗುರಶಮನ್ ಮೃತದೇಹವನ್ನು ಪೊಲೀಸ್ ಮುಳುಗುಪಟುಗಳು ಕ್ಯಾನರಿ ವಾರ್ಫ್ ಸರೋವರದಿಂದ ಮೇಲಕ್ಕೆತ್ತಿರುವುದಾಗಿ ತಿಳಿದುಬಂದಿದೆ.
ಇದೊಂದು ಆಕಸ್ಮಿಕ ಸಾವೆಂದು ಪರಿಗಣಿಸಲಾಗಿದೆ. ಸಂದೇಹಾಸ್ಪದ ಸಾವೆನ್ನುವುದಕ್ಕೆ ಯಾವುದೇ ಪುರಾವೆಗಳೂ ಇಲ್ಲವೆಂದು ಪಲೀಸ್ ಪತ್ತೆದಾರಿ ಮುಖ್ಯ ನಿರೀಕ್ಷಕ (ಡಿಸಿಐ) ಜೇಮ್ಸ್ ಕೊನ್ವೇ ತಿಳಿಸಿದ್ದಾರೆ.
ಮೃತ ವಿದ್ಯಾರ್ಥಿ ಗುರಶಮನ್ ಸಿಂಗ್ ಭಾಟಿಯಾ ಲಂಡನ್ ಲೊಫ್ಬೊರೊ ವಿವಿಯಲ್ಲಿ ಡಿಜಿಟಲ್ ಆರ್ಥಿಕತೆ ವಿಷಯದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದನು.
ಗುರುಶರಣ್ ಸಿಂಗ್ ನಾಪತ್ತೆ ಪ್ರಕರಣವನ್ನು ಬಿಜೆಪಿ ನಾಯಕ ಮನಜಿಂದರ್ ಸಿಂಗ್ ಸಿರ್ಸಾ ಅವರು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರ ಗಮನಕ್ಕೆ ತಂದಿದ್ದರು.