ಲಂಡನ್ | ಅಮೆರಿಕ ರಾಯಭಾರಿ ಕಚೇರಿ ಬಳಿ ಸ್ಫೋಟಕ ಪತ್ತೆ

Update: 2024-11-22 17:15 GMT

PC  :PTI

ಲಂಡನ್ : ಇಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ಬಳಿ ಶುಕ್ರವಾರ ಶಂಕಾಸ್ಪದ ಸ್ಫೋಟಕವೊಂದು ಪತ್ತೆಯಾಗಿದ್ದು, ಅದನ್ನು ಬ್ರಿಟನ್ ಪೊಲೀಸರು ನಿಯಂತ್ರಿತವಾಗಿ ಸ್ಫೋಟಿಸಿ, ನಿಷ್ಕ್ರಿಯಗೊಳಿಸಿದ್ದಾರೆ.

ನೈನ್ ಎಲ್ಮ್ಸ್ ಪ್ರದೇಶದಲ್ಲಿರುವ ಅಮೆರಿಕ ರಾಯಭಾರಿ ಕಚೇರಿಯ ಹೊರಗೆ ಶಂಕಾಸ್ಪದ ಪ್ಯಾಕೇಜ್ ಪತ್ತೆಯಾಗಿತ್ತು. ಕೂಲಂಕುಷವಾಗಿ ಪರಿಶೀಲಿಸಿದ ಪೊಲೀಸರು ಅದರಲ್ಲಿ ಸ್ಫೋಟಕವಿರುವುದನ್ನು ಪತ್ತೆಹಚ್ಚಿದ್ದಾರೆ. ಈ ಸಂದರ್ಭ ಮುನ್ನೆಚ್ಚರಿಕೆ ಕ್ರಮವಾಗಿ ಪೊಂಟೊನ್ ರೋಡ್ ಪ್ರದೇಶವನ್ನು ಮುಚ್ಚುಗಡೆಗೊಳಿಸಲಾಯಿತು.

ಬಳಿಕ ಆ ಸ್ಫೋಟಕವನ್ನು ಪರಿಣಿತರ ಮೂಲಕ ನಿಯಂತ್ರಿತವಾಗಿ ಸ್ಫೋಟಿಸಲಾಯಿತು. ಈ ಸಂದರ್ಭದಲ್ಲಿ ಪರಿಸರದಲ್ಲಿ ಭಾರೀ ದೊಡ್ಡ ಶಬ್ಧವಾಗಿರುವುದಾಗಿ ಮೆಟ್ರೋಪಾಲಿಟನ್ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ತನಿಖೆ ನಡೆಯುತ್ತಿದೆ. ಈ ಪ್ರದೇಶವು ಸುರಕ್ಷಿತವಾಗಿದೆ ಎಂಬುದನ್ನು ಖಾತರಿಪಡಿಸಲು ಆನಂತರವೂ ತಪಾಸಣೆ ನಡೆಸಲಾಯಿತೆಂದು ಬ್ರಿಟಿಷ್ ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News