2025ರ ವಿಶ್ವದ ಅತ್ಯುತ್ತಮ ನಗರಗಳ ಪಟ್ಟಿ ಬಿಡುಗಡೆ : ಭಾರತದ ಒಂದು ನಗರಕ್ಕೂ 100ರೊಳಗೆ ಸ್ಥಾನವಿಲ್ಲ!

Update: 2024-11-22 20:23 IST
Photoof LONDON

ಸಾಂದರ್ಭಿಕ ಚಿತ್ರ | PC : PTI 

  • whatsapp icon

ಹೊಸದಿಲ್ಲಿ: ನವೆಂಬರ್ 20ರಂದು 2025ರ ವಿಶ್ವದ ಅತ್ಯುತ್ತಮ ನಗರಗಳ ಶ್ರೇಯಾಂಕ ಪಟ್ಟಿ ಬಿಡುಗಡೆಯಾಗಿದ್ದು, ಮೊದಲ ನೂರು ಶ್ರೇಯಾಂಕಗಳಲ್ಲಿ ಭಾರತದ ಯಾವುದೇ ನಗರವೂ ಸ್ಥಾನ ಪಡೆದಿಲ್ಲ. ನಗರಗಳಲ್ಲಿನ ವಾಸಯೋಗ್ಯತೆ, ಪ್ರೀತಿಪಾತ್ರತ್ವ ಹಾಗೂ ಸಮೃದ್ಧತೆಯನ್ನು ಆಧರಿಸಿ, ಇಪ್ಸೋಸ್ ಸಹಯೋಗದಲ್ಲಿ ರೆಸೊನೆನ್ಸ್ ಕನ್ಸಲ್ಟೆನ್ಸಿ ಈ ಶ್ರೇಯಾಂಕವನ್ನು ಸಂಕಲಿಸಿದೆ.

ಇದೇ ವೇಳೆ, 2025ರ ವಿಶ್ವದ ಅತ್ಯುತ್ತಮ ನಗರಗಳ ಶ್ರೇಯಾಂಕ ಪಟ್ಟಿಯಲ್ಲಿ ಸತತ ಹತ್ತನೆಯ ಬಾರಿ ಪ್ರಥಮ ಸ್ಥಾನ ಕಾಯ್ದುಕೊಂಡಿರುವ ಲಂಡನ್, ನ್ಯೂಯಾರ್ಕ್ ಮತ್ತು ಪ್ಯಾರಿಸ್ ಅನ್ನು ಶ್ರೇಯಾಂಕ ಪಟ್ಟಿಯಲ್ಲಿ ಹಿಂದಿಕ್ಕಿದೆ.

ಶ್ರೇಯಾಂಕ ಪಟ್ಟಿಯಲ್ಲಿ ಲಂಡನ್ ತನ್ನ ಪ್ರಾಬಲ್ಯವನ್ನು ಮುಂದುವರಿಸಿದ್ದರೆ, ಭಾರತದ ಯಾವ ನಗರವೂ 100ರ ಶ್ರೇಯಾಂಕದೊಳಗೆ ಸ್ಥಾನ ಪಡೆದಿಲ್ಲ. ಏಶಿಯ-ಪೆಸಿಫಿಕ್ ಪ್ರಾಂತ್ಯದಲ್ಲಿ ದಿಲ್ಲಿ ಮತ್ತು ಮುಂಬೈ ಪ್ರಬಲ ಸಾಧನೆ ಮಾಡಿದ್ದರೂ, ತಮ್ಮ ವಾಸಯೋಗ್ಯತೆಯ ಸವಾಲುಗಳಿಂದ ಜಾಗತಿಕ ಮಟ್ಟದಲ್ಲಿ ಹಿಂದೆ ಬಿದ್ದಿವೆ.

ಈ ಶ್ರೇಯಾಂಕವು 31 ದೇಶಗಳ ಸುಮಾರು 22,000 ಜನರ ಜಾಗತಿಕ ಸಮೀಕ್ಷೆಯನ್ನು ಆಧರಿಸಿದ್ದು, ಕೈಗೆಟಕುವಿಕೆ, ಆರೋಗ್ಯ ಸೇವಾ ಗುಣಮಟ್ಟ, ಸಾಂಸ್ಕೃತಿಕ ಸ್ಪಂದನೆ, ಆರ್ಥಿಕ ಬಲಿಷ್ಠತೆ ಹಾಗೂ ಸಾಮಾಜಿಕ ಸ್ಪಂದನೆಯಂಥ ವಿಷಯಗಳ ಮೇಲೆ ಗಮನ ಕೇಂದ್ರೀಕರಿಸಿದೆ.

2025ರ ಶ್ರೇಯಾಂಕದಲ್ಲಿ ಕ್ರಮವಾಗಿ ಲಂಡನ್, ನ್ಯೂಯಾರ್ಕ್, ಪ್ಯಾರಿಸ್, ಟೋಕಿಯೊ ಮತ್ತು ಸಿಂಗಾಪೂರ್ ಮೊದಲ ಐದು ಸ್ಥಾನಗಳಲ್ಲಿವೆ.

ಮೊದಲ 100ರ ಶ್ರೇಯಾಂಕದಲ್ಲಿ ಅಮೆರಿಕ ಪ್ರಾಬಲ್ಯ ಮೆರೆದಿದ್ದು, ಅಮೆರಿಕದ 36 ನಗರಗಳು ಮೊದಲ 100ರ ಶ್ರೇಯಾಂಕ ಪಟ್ಟಿಯೊಳಗೆ ಸ್ಥಾನ ಪಡೆದಿವೆ. ಅಮೆರಿಕ ನಂತರದ ಸ್ಥಾನದಲ್ಲಿರುವ ಕೆನಡಾದ ಆರು ನಗರಗಳು ಮೊದಲ 100ರ ಶ್ರೇಯಾಂಕದಲ್ಲಿ ಕಾಣಿಸಿಕೊಂಡಿವೆ. ಅಲ್ಲದೆ, ಕೇಪ್ ಟೌನ್ ಹಾಗೂ ರಿಯೊ ಡಿ ಜನೈರೊ ಇದೇ ಮೊದಲ ಬಾರಿಗೆ 100ರ ಶ್ರೇಯಾಂಕ ಪಟ್ಟಿಯನ್ನು ಪ್ರವೇಶಿಸಿದ್ದು, ಜಾಗತಿಕ ನೋಟದಲ್ಲಿ ಹೆಚ್ಚು ವೈವಿಧ್ಯಮಯತೆಯನ್ನು ತಂದಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News