ಮಲೇಶ್ಯಾದ ದೊರೆಯಾಗಿ ಸುಲ್ತಾನ್ ಇಬ್ರಾಹಿಂ ಆಯ್ಕೆ

Update: 2023-10-27 17:09 GMT

Photo : instagram/officialsultanibrahim

ಕೌಲಲಾಂಪುರ, ಅ.27: ಮಲೇಶ್ಯಾದ ಮುಂದಿನ ದೊರೆಯಾಗಿ ಸುಲ್ತಾನ್ ಇಬ್ರಾಹಿಂ ಇಸ್ಕಂದರ್‍ರನ್ನು ಅಲ್ಲಿನ ರಾಜಕುಟುಂಬ ಆಯ್ಕೆ ಮಾಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿದ ವರದಿ ತಿಳಿಸಿದೆ.

ದಕ್ಷಿಣದ ಜೊಹೊರ್ ರಾಜ್ಯದವರಾದ ಸುಲ್ತಾನ್ ಇಬ್ರಾಹಿಂ ಹಾಲಿ ದೊರೆ ಅಲ್-ಸುಲ್ತಾನ್ ಅಬ್ದುಲ್ಲಾರಿಂದ 2024ರ ಜನವರಿ 31ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ಮಲೇಶ್ಯಾದಲ್ಲಿ ದೊರೆಯ ಹುದ್ದೆಗೆ 9 ರಾಜಮನೆತನದ ನಡುವೆ ಪರ್ಯಾಯ ಆಯ್ಕೆ ನಡೆಯುತ್ತದೆ ಮತ್ತು ದೊರೆಯ ಅಧಿಕಾರಾವಧಿ 5 ವರ್ಷವಾಗಿರುತ್ತದೆ. ಮಲೇಶ್ಯಾದ ಫೆಡರಲ್ ಸಂವಿಧಾನವು ದೊರೆಗೆ ಕೆಲವು ವಿವೇಚನಾ ಅಧಿಕಾರವನ್ನು ಮಾತ್ರ ನೀಡುತ್ತದೆ. ದೊರೆಯು ಪ್ರಧಾನಿ ಹಾಗೂ ಮಂತ್ರಿಮಂಡಲದ ಸಲಹೆಯ ಮೇರೆಗೆ ಕಾರ್ಯ ನಿರ್ವಹಿಸಬೇಕಾಗುತ್ತದೆ. 

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News