ಮಧ್ಯಪ್ರಾಚ್ಯ ಸಂಘರ್ಷ: ನಾಗರಿಕ ವಿಮಾನ ಸಂಚಾರಕ್ಕೆ ತೊಡಕು

Update: 2024-10-02 03:12 GMT

ಸಾಂದರ್ಭಿಕ ಚಿತ್ರ PC: x.com/IdeallyaNews

ಹೊಸದಿಲ್ಲಿ: ಇಸ್ರೇಲ್ ಮೇಲೆ ಮಂಗಳವಾರ ತಡರಾತ್ರಿ ಇರಾನ್ ಕ್ಷಿಪಣಿ ದಾಳಿ ಆರಂಭಿಸಿದ ಬೆನ್ನಲ್ಲೇ ಮಧ್ಯಪ್ರಾಚ್ಯ ಸಂಘರ್ಷ ಉಲ್ಬಣಿಸಿದ್ದು, ಈ ಭಾಗದ ವಾಯುಪ್ರದೇಶಗಳಲ್ಲಿ ಹಾರಾಡುವ ವಿಮಾನಗಳ ಸುರಕ್ಷತೆ ಬಗ್ಗೆ ಆತಂಕ ಮೂಡಿದೆ. ಫ್ರಾಂಕ್ ಫರ್ಟ್ ನಿಂದ ಹೈದರಾಬಾದ್ ಮತ್ತು ಮುಂಬೈಗೆ ಹೊರಟಿದ್ದ ಲುಫ್ತಾನ್ಸಾ ವಿಮಾನಗಳು ಜರ್ಮನಿಗೆ ಮರಳಿದ್ದು, ಸುರಕ್ಷತೆ ಕಾರಣದಿಂದ ಯುದ್ಧಪ್ರದೇಶದಲ್ಲಿ ಹಾರಾಟ ನಡೆಸದಿರಲು ನಿರ್ಧರಿಸಲಾಗಿದೆ.

ಇರಾನ್ ದೇಶ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ಆರಂಭಿಸಿದಾಗ ಲುಫ್ತಾನ್ಸಾ ವಿಮಾನಯಾನ ಸಂಸ್ಥೆಯ ಫ್ರಾಂಕ್ ಫರ್ಟ್ - ಹೈದ್ರಾಬಾದ್ ಎಲ್ಎಚ್752 ಮತ್ತು ಫ್ರಾಂಕ್ ಫರ್ಟ್-ಮುಂಬೈ ಎಲ್ಎಚ್ 756 ವಿಮಾನಗಳು ಟರ್ಕಿ ವಾಯುಪ್ರದೇಶದಲ್ಲಿದ್ದವು. ವಿಮಾನಗಳು ಫ್ರಾಂಕ್ ಫರ್ಟ್ ಗೆ ಮರಳಿವೆ. ಈ ಹಿನ್ನೆಲೆಯಲ್ಲಿ ಹೈದ್ರಾಬಾದ್ ಮತ್ತು ಮುಂಬೈನಿಂದ ಫ್ರಾಂಕ್ಫರ್ಟ್ಗೆ ಬುಧವಾರ ಮುಂಜಾನೆ ಹೊರಡಬೇಕಾದ ವಿಮಾನಗಳ ಸೇವೆ ರದ್ದುಪಡಿಸಲಾಗಿದೆ.

ಸ್ವಿಡ್ಜರ್ಲೆಂಡ್ ಕೂಡಾ ಇರಾನ್, ಇರಾಕ್ ಮತ್ತು ಜೋರ್ಡಾನ್ ಪ್ರದೇಶದಲ್ಲಿ ಸಂಚಾರ ನಡೆಸದಿರಲು ನಿರ್ಧರಿಸಿದೆ. ಇದರಿಂದಾಗಿ ದುಬೈ, ಭಾರತ ಮತ್ತು ಆಗ್ನೇಯ ಏಷ್ಯಾ ಸೇವೆಗಳಲ್ಲಿ 15 ನಿಮಿಷ ವಿಳಂಬವಗಲಿದೆ. ಅಲ್ಪಾವಧಿ ಹೊಂದಾಣಿಕೆಗಳ ಹೊರತಾಗಿಯೂ, ಇಸ್ರೇಲ್ ಮತ್ತು ಲೆಬಬಾನಿ ವಾಯುಪ್ರದೇಶದಲ್ಲಿ ಅಕ್ಟೋಬರ್ 31ರವರೆಗೆ ಸಂಚರಿಸದಿರಲು ನಿರ್ಧರಿಸಲಾಗಿದೆ ಎಂದು ಸ್ವಿಸ್ ಹೇಳಿಕೆ ನೀಡಿದೆ. ಮಂಗಳವಾರದ ಜ್ಯೂರಿಚ್-ದುಬೈ ವಿಮಾನಗಳನ್ನು ಟರ್ಕಿಯ ಅಂಟಾಲ್ಯಾಗೆ ವಿಮುಖಗೊಳಿಸಲಾಗಿದೆ. ಗಲಭೆಪೀಡಿದ ಪ್ರದೇಶಗಳ ವಾಯುಪ್ರದೇಶದಿಂದ ಹೊರಭಾಗದಲ್ಲಿ ಸಂಚರಿಸುವ ಸಲುವಾಗಿ ಅಂಟ್ಯಾಲಾದಲ್ಲಿ ವಿಮಾನ ಇಂಧನ ಭರ್ತಿ ಮಾಡಿಕೊಂಡು ದುಬೈ ಯಾನ ಮುಂದುವರಿಸಿತು.

"ಪ್ರಸಕ್ತ ಭದ್ರತಾ ಪರಿಸ್ಥಿತಿ ಹಿನ್ನೆಲೆಯಲ್ಲಿ ನಾವು ಇರಾಕ್, ಇರಾನ್ ಮತ್ತು ಜೋರ್ಡಾನ್ ವಾಯುಪ್ರದೇಶದಲ್ಲಿ ಹಾರಾಟ ನಡೆಸದಿರಲು ನಿರ್ಧರಿಸಿದ್ದೇವೆ" ಎಂದು ಲುಫ್ತಾನ್ಸಾ ಹೇಳಿಕೆ ನೀಡಿದೆ. ಮಂಗಳವಾರದ ಮ್ಯೂನಿಚ್-ಮುಂಬೈ ವಿಮಾನಯಾನ ಸಾಧ್ಯವಾಗಿದೆ.

"ನಮ್ಮ ಕಾರ್ಯಾಚರಣೆಗೆ ಮಧ್ಯಪ್ರಾಚ್ಯ ಪ್ರದೇಶದಲ್ಲಿ ಯಾವುದೇ ಸಂಭಾವ್ಯ ಭದ್ರತಾ ಅಥವಾ ಸುರಕ್ಷಾ ಅಪಾಯ ಸಾಧ್ಯತೆಗಳು ಇದ್ದಲ್ಲಿ, ತಡೆರಹಿತ ಕಾರ್ಯಾಚರಣೆಗಳ ಮೇಲೆ ಕನಿಷ್ಠ ಪರಿಣಾಮವಾಗುವಂತೆ ಅಗತ್ಯವಾದರೆ ಹೊಂದಾಣಿಕೆಗಳನ್ನು ಮಾಡಿಕೊಳ್ಳಲಾಗುವುದು" ಎಂದು ಏರ್ ಇಂಡಿಯಾ ಅಧಿಕಾರಿಗಳು ಹೇಳಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News