ಯೆಮನ್ ನಿಂದ ಇಸ್ರೇಲ್ ನತ್ತ ಕ್ಷಿಪಣಿ ಪ್ರಯೋಗ
Update: 2025-04-26 21:10 IST

PC : NDTV
ಜೆರುಸಲೇಂ: ಯೆಮನ್ ನಿಂದ ಪ್ರಯೋಗಿಸಲಾದ ಕ್ಷಿಪಣಿಯನ್ನು ಮತ್ತು ಪೂರ್ವ ದಿಕ್ಕಿನಿಂದ ಧಾವಿಸಿ ಬರುತ್ತಿದ್ದ ಡ್ರೋನ್ ಅನ್ನು ಹೊಡೆದುರುಳಿಸಿರುವುದಾಗಿ ಇಸ್ರೇಲ್ ಮಿಲಿಟರಿ ಶನಿವಾರ ಹೇಳಿದೆ.
`ಇಸ್ರೇಲ್ ನ ಹಲವು ಪ್ರದೇಶಗಳಲ್ಲಿ ಸೈರನ್ ಮೊಳಗಿದ ಹಿನ್ನೆಲೆಯಲ್ಲಿ ನಮ್ಮ ವಾಯುರಕ್ಷಣಾ ವ್ಯವಸ್ಥೆ ಯೆಮನ್ ನಿಂದ ಪ್ರಯೋಗಿಸಲಾದ ಕ್ಷಿಪಣಿಯನ್ನು ಇಸ್ರೇಲ್ ಪ್ರದೇಶಕ್ಕೆ ದಾಟುವ ಮುನ್ನ ತುಂಡರಿಸಿದೆ. ಇದರ ಬೆನ್ನಲ್ಲೇ ಪೂರ್ವ ದಿಕ್ಕಿನಿಂದ ಧಾವಿಸಿ ಬರುತ್ತಿದ್ದ ಡ್ರೋನ್ ಅನ್ನೂ ನಮ್ಮ ವಾಯುಪಡೆ ಮಾರ್ಗ ಮಧ್ಯದಲ್ಲೇ ತುಂಡರಿಸಿದೆ. ಮಾರ್ಚ್ 18ರಂದು ಗಾಝಾ ಕಾರ್ಯಾಚರಣೆಯನ್ನು ಇಸ್ರೇಲ್ ಸೇನೆ ಪುನರಾರಂಭಿಸಿದ ಬಳಿಕ ಇದುವರೆಗೆ ಹೌದಿಗಳು ಪ್ರಯೋಗಿಸಿದ 22 ಕ್ಷಿಪಣಿಗಳನ್ನು ತುಂಡರಿಸಲಾಗಿದೆ ಎಂದು ಇಸ್ರೇಲ್ ಸೇನೆಯ ರೇಡಿಯೊ ವರದಿ ಮಾಡಿದೆ.