ಟ್ವಿಟರ್ ಬಳಕೆದಾರರಿಗೆ ಮಾಸಿಕ ಶುಲ್ಕ: ಎಲಾನ್ ಮಸ್ಕ್
ವಾಷಿಂಗ್ಟನ್ : ಆನ್ಲೈನ್ ವೇದಿಕೆ ‘ಎಕ್ಸ್’(ಈ ಹಿಂದಿನ ಟ್ವಿಟರ್) ತನ್ನ ಎಲ್ಲಾ ಬಳಕೆದಾರರಿಗೆ ಮಾಸಿಕ ಶುಲ್ಕ ವಿಧಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ಸಂಸ್ಥೆಯ ಮಾಲಕ ಎಲಾನ್ ಮಸ್ಕ್ ಸೋಮವಾರ ಹೇಳಿದ್ದು ‘ಬಾಟ್ಸ್’ಗಳನ್ನು ಕಡಿಮೆ ಮಾಡುವ ಅಗತ್ಯವನ್ನು ಉಲ್ಲೇಖಿಸಿದ್ದಾರೆ.
ಮನುಷ್ಯರ ಬದಲು ಕಂಪ್ಯೂಟರ್ ಗಳಿಂದ ನಡೆಸಲ್ಪಡುವ ಖಾತೆಗಳಾದ ‘ಬಾಟ್ಸ್’ಗಳು ‘ಎಕ್ಸ್’ನಲ್ಲಿ ಸಾಮಾನ್ಯವಾಗಿದೆ. ಇದನ್ನು ರಾಜಕೀಯ ಸಂದೇಶ ಅಥವಾ ಜನಾಂಗೀಯ ದ್ವೇಷದ ಹೇಳಿಕೆಗಳನ್ನು ಕೃತಕವಾಗಿ ವರ್ಧಿಸಲು ಬಳಸಬಹುದಾಗಿದೆ.
ಸೋಮವಾರ ಮಸ್ಕ್ ಜತೆಗಿನ ಸಭೆಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆಥನ್ಯಾಹು ಆನ್ ಲೈನ್ ನಲ್ಲಿ ಯೆಹೂದಿ ವಿರೋಧಿ ಸಂದೇಶಗಳ ಪ್ರಸಾರದ ಬಗ್ಗೆ ಪ್ರಶ್ನಿಸಿದ್ದರು ಮತ್ತು ಸಂದೇಶಗಳ ಕೃತಕ ವರ್ಧನೆ ಸೇರಿದಂತೆ ಬಾಟ್ಸ್ ಗಳ ಬಳಕೆಯನ್ನು ಯಾವ ರೀತಿ ತಡೆಗಟ್ಟಬಹುದು ಎಂದು ಕೇಳಿದ್ದರು. ಇದಕ್ಕೆ ಉತ್ತರಿಸಿದ ಮಸ್ಕ್ ‘ಎಕ್ಸ್ ವ್ಯವಸ್ಥೆಯ ಬಳಕೆದಾರರಿಗೆ ಮಾಸಿಕ ಶುಲ್ಕ ವಿಧಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದಿದ್ದಾರೆ.